Ticker

6/recent/ticker-posts

Ad Code

ಮಂಜೇಶ್ವರ, ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವತಿಯರು ನಾಪತ್ತೆ, ಪೊಲೀಸ್ ತನಿಖೆ ಆರಂಭ


 ಕುಂಬಳೆ: ಮಂಜೇಶ್ವರ, ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇಬ್ಬರು ಯುವತಿಯರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.  ಉಪ್ಪಳ ಮಣ್ಣಂಗುಯಿ ನಿವಾಸಿ ಬಾತಿಷ ಎಂಬವರ ಪತ್ನಿ ರಂಸೀನ(27) ನಾಪತ್ತೆಯಾಗಿದ್ದಾರೆ. ಈಕೆ ನಿನ್ನೆ (ಶುಕ್ರವಾರ) ಸಾಯಂಕಾಲ 4 ಗಂಟೆಗೆ ಉಪ್ಪಳ ಪೇಟೆಗೆಂದು ಹೋದವರು ಹಿಂತಿರುಗಿಲ್ಲವೆನ್ನಲಾಗಿದೆ.  ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಬ್ರಾಣ‌ ನಿವಾಸಿ ರಂಜಿತ (22) ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ

Post a Comment

0 Comments