Ticker

6/recent/ticker-posts

Ad Code

ಪಳತ್ತಡ್ಜ ಶ್ರೀ ಅಯ್ಯಪ್ಪ ಭಜನಾ ಮಂದಿರಕ್ಕೆ ಮೇಲ್ಮಾಡು ನಿರ್ಮಾಣ, ಕೂಪನ್ ಬಿಡುಗಡೆ ಕಾರ್ಯಕ್ರಮ ಜೂನ್ 1 ರಂದು


 ಬದಿಯಡ್ಕ: ಪಳ್ಳತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಮೇಲ್ಮಾಡು ನಿರ್ಮಾಣಕ್ಕೆ ಸಿದ್ದತೆ ನಡೆದಿದೆ. ಸುಮಾರು 5 ಲಕ್ಷ ರೂ ವ್ಯಯಿಸಿ ಮಂದಿರಕ್ಕೆ ಮೇಲ್ಮಾಡು ನಿರ್ಮಿಸಲು ನಿರ್ದರಿಸಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.

   ಮೇಲ್ಮಾಡು ನಿರ್ಮಾಣಕ್ಕೆ ಅಗತ್ಯವಿರುವ ಹಣ ಸಂಗ್ರಹಿಸುವ ಸಲುವಾಗಿ ಸಿದ್ದಪಡಿಸಿದ ಕೂಪನ್ ಬಿಡುಗಡೆ ಕಾರ್ಯಕ್ರಮವು ಜೂನ್ 1 ಆದಿತ್ಯವಾರ ಬೆಳಗ್ಗೆ 9.30 ಕ್ಕೆ ಭಜನಾ ಮಂದಿರದಲ್ಲಿ ಜರಗಲಿರುವುದು. ಧಾರ್ಮಿಕ ಮುಂದಾಳು  ಬಿ.ಗೋಪಾಲಕೃಷ್ಣ ಪೈ ಬದಿಯಡ್ಕ ಅವರು ಕೂಪನ್ ಬಿಡುಗಡೆ ಮಾಡುವರು. ಕೃಷಿಕರೂ ಧಾರ್ಮಿಕ ಮುಂದಾಳುಗಳೂ ಆದ ಪೆರುಮುಂಡ ಶಂಕರ ನಾರಾಯಣ ಭಟ್ ಅವರು  ಕೂಪನ್ ಸ್ವೀಕರಿಸುವರು. ಉದಯಕೇಶವ ಭಟ್ ಅಧ್ಯಕ್ಷತೆ ವಹಿಸುವರು. ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಮುಖ್ಯ ಕರ್ಮಿ  ಗೋಪಾಲಕೃಷ್ಣ ಕುಲಾಲ್ ವಾಂತಿಚಾಲು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸೀತಾರಾಮ ಗುರುಸ್ವಾಮಿ ಪಳ್ಳತ್ತಡ್ಕ, ಉಪಸ್ಥಿತರಿರುವರು.

Post a Comment

0 Comments