ಮದ್ಯ ಮಾರಾಟ ನಡೆಯುತ್ತಿದೆಯೆಂಬ ಮಾಹಿತಿ ತಿಳಿದು ಪರಿಶೋಧನೆಗೆ ಆಗಮಿಸಿದ ಎಕ್ಸೈಸ್ ಅಧಿಕಾರಿಗಳ ಮೇಲೆ ತಕ್ಕಡಿಯ ಪಾತ್ರೆಯಿಂದ ಹಲ್ಲೆಗೈದು ಕಚ್ಚಿದ ಪ್ರಕರಣ, ಆರೋಪಿಗೆ 2 ವರ್ಷ ಸಜೆ, 20 ಸಾವಿರ ರೂ ದಂಡ ವಿಧಿಸಿದ ನ್ಯಾಯಾಲಯ
ಕಾಸರಗೋಡು: ಅನಧಿಕೃತವಾಗಿ ಮದ್ಯ ಮಾರಾಟ ನಡೆಯುತ್ತಿದೆಯೆಂಬ ಮಾಹಿತಿ ತಿಳಿದು ಆಗಮಿಸಿದ ಎಕ್ಸ್ಪ್ರೆಸ್ ಅಧಿಕಾರಿಗಳನ್ನು ಹಲ್ಲೆಗೈದ ಪ್ರಕರಣದಲ್ಲಿ ಆರೋಪಿಗೆ 2 ವರ್ಷ ಸಜದ ಹಾಗೂ 20 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಕುಂಬಳೆ ಕೊಯ್ಪಾಡಿ ಕುಂಟಂಗೇರಡ್ಕ ನಿವಾಸಿ ಕೆ.ಪ್ರಭಾಕರ ಯಾನೆ ಅಣ್ಣಿ ಪ್ರಭಾಕರ(61) ಎಂಬವರಿಗೆ ಜಿಲ್ಲಾ ಅಡಿಶನಲ್ ಸೆಶನ್ಸ್ ನ್ಯಾಯಾಲಯ (2) ಈ ಶಿಕ್ಷೆ ವಿಧಿಸಿದೆ. 2022 ಎಪ್ರಿಲ್ 2 ರಂದು ರಾತ್ರಿ 8 ಗಂಟೆಗೆ ಹಲ್ಲೆ ಪ್ರಕರಣ ನಡೆದಿದೆ. ಕುಂಟಂಗೇರಡ್ಕದ ಜನತಾ ಹೋಟೆಲಿನಲ್ಲಿ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪರಿಶೋಧನೆಗೆ ಆಗಮಿಸಿದ ಕೆ.ವಿನೋಜ್, ವಿ.ಬಾಬುರಾಜ್ ಎಂಬಿವರ ಮೇಲೆ ಆರೋಪಿ ತಕ್ಕಡಿಯ ಪಾತ್ರೆಯಿಂದ ಹಲ್ಲೆ ನಡೆಸಿದ್ದನು. ಎಕ್ಸ್ಪ್ರೆಸ್ ಅಧಿಕಾರಿಗಳ ತಲೆಗೆ ಹಲ್ಲೆಗೈದಿದ್ದು ಕೈಗಳನ್ನು ಕಚ್ಚಿ ಗಾಯಗೊಳಿಸಿದ್ದನು. ಕುಂಬಳೆ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದು ಆರೋಪ ಪಟ್ಟಿ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದರು. ಅಂದು ಬೆಳಗ್ಗೆ ಎಕ್ಸ್ಪ್ರೆಸ್ ಅಧಿಕಾರಿಗಳು ಪರಿಶೋಧನೆ ನಡೆಸಿ ಏನೂ ಸಿಗದೆ ಹಿಂತಿರುಗಿದ್ದರು. ರಾತ್ರಿ ಪುನಃ ಪರಿಶೋಧನೆಗೆ ಅಧಿಕಾರಿಗಳು ಆಗಮಿಸಿದಾಗ ಆರೋಪಿ ದಾಳಿ ನಡೆಸಿದ್ದರು
0 Comments