Ticker

6/recent/ticker-posts

Ad Code

40 ಕೋಟಿ ರೂ ಬೆಲೆಯ ಮಾದಕವಸ್ತುಗಳ ಸಹಿತ ಮೂರು ಮಂದಿ ಮಹಿಳೆಯರ ಬಂಧನ


 ಕೋಜಿಕ್ಕೋಡ್: 40 ಕೋಟಿ ರೂ ಬೆಲೆಯ ಮಾದಕ ವಸ್ತುಗಳ ಸಹಿತ 3 ಮಂದಿ ಮಹಿಳೆಯರನ್ನು ಕರಿಪೂರ್ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ. ಚೆನ್ನೈ ನಿವಾಸಿ ರಾಬಿಯತ್(40), ಕೊಯಂಬತ್ತೂರು ನಿವಾಸಿ ಕವಿತ(40), ತ್ರಿಶೂರ್ ನಿವಾಸಿ ನಿಮ(39) ಬಂಧಿತರು. ಇವರ ಕೈಯಿಂದ 36 ಕಿಲೊ ಹೈಬ್ರಿಡ್ ಗಾಂಜ, 15 ಕಿಲೊ ಥಾಯ್ ಲಾಂಡ್ ನಿರ್ಮಿತ ಬಿಸ್ಕತ್ತು, ಎಂಡಿಎಂಎ ಮಿಶ್ರಿತ ಕ್ರೀಂ ಬಿಸ್ಕತ್ತು, ಕೇಕ್ ಎಂಬಿವುಗಳನ್ನು ವಶಪಡಿಸಲಾಗಿದೆ. ನಿನ್ನೆ (ಮಂಗಳವಾರ) ರಾತ್ರಿ 11.45 ಕ್ಕೆ ಥಾಯ್ ಲಾಂಡ್ ನಿಂದ ಬಂದಿಳಿದ ಏಯರ್ ಏಷ್ಯಾ ವಿಮಾನದಲ್ಲಿ ಇವರು ಕರಿಪೂರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಕಸ್ಟಂಸ್ ಅಧಿಕಾರಿಗಳು ಇವರನ್ನು ತಪಾಸಣೆ ನಡೆಸಿದಾಗ ಮಾದಕವಸ್ತು ಲಭಿಸಿದೆ

Post a Comment

0 Comments