Ticker

6/recent/ticker-posts

Ad Code

ನೆಕ್ರಾಜೆ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಕ್ತ ಜನ ಸಹಭಾಗಿತ್ವದಲ್ಲಿ ಪುತ್ರ ಕಾಮೇಷ್ಠಿ - ಧನ್ವಂತರಿ ಯಾಗ ಸಂಪನ್ನ


ಬದಿಯಡ್ಕ: ನೆಕ್ರಾಜೆ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ  ಧನ್ವಂತರಿ ಪುತ್ರ ಕಾಮೇಷ್ಠಿ ಯಾಗ ಸಂಪನ್ನಗೊಂಡಿತು.ಡಾ. ವೇಣುಗೋಪಾಲ ಕಳೆಯತ್ತೋಡಿ ಅವರು ದೀಪ ಪ್ರಜ್ವಲನಗೊಳಿಸಿದರು.

ನಂತರ ವಿವಿಧ ಸಂಘಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಗಣಪತಿ ಹೋಮ,ಯಾಗ ಸಂಕಲ್ಪ ಧನ್ವಂತರಿ ನಾಮಜಪ ಯಜ್ಞ, ಧನ್ವಂತರೀಯಾಗ  ಪುತ್ರ ಕಾಮೆಷ್ಠಿ ಯಾಗದ ನೇತೃತ್ವವನ್ನು ವೈದಿಕ ವಿದ್ವಾಂಸ ಕಶೆಕೋಡಿ  ಶ್ರೀ ಸೂರ್ಯನಾರಾಯಣ ಭಟ್ ಕಲ್ಲಡ್ಕ  ವಹಿಸಿದ್ದರು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರು ಆಶೀರ್ವಚನ ನೀಡಿದರು.

ಶ್ರೀಗಳವರು ತಮ್ಮ ಆಶೀರ್ವಚನದಲ್ಲಿ ಆಧ್ಯಾತ್ಮಿಕ ಶಕ್ತಿ ಆರಾಧನೆ ಜಪ ತಪ ಯಾಗದಿಂದ  ಸಂತತಿ ಈ ಎಲ್ಲ ವಿಚಾರಗಳನ್ನು ವೈಜ್ಞಾನಿಕವಾಗಿ ತುಲನೆ ಮಾಡಬಾರದು, ಏಕಾಗ್ರತೆಯಿಂದ ಭಗವಂತನ ಸೇವೆಯಲ್ಲಿ ಸಂಪೂರ್ಣವಾಗಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಪರಿಪೂರ್ಣವಾದ ಅನುಗ್ರಹ ಹಾಗೂ ಸತ್ ಫಲವನ್ನು ಪಡೆಯಲು ಸಾಧ್ಯ ಎಂದು ಹೇಳಿದರು.ಸಭೆಯ ಅಧ್ಯಕ್ಷತೆಯನ್ನು ಡಾ ಶ್ರೀ ಕಿಶೋರ್ ಕುಮಾರ್ ಕುಣಿಕುಳ್ಳಾಯ ವಹಿಸಿದ್ದರು.

 ಬ್ರಹ್ಮಶ್ರೀ ಎನ್.ಆರ್ ದಾಮೋದರ ಶರ್ಮ ಬಾರ್ಕೂರು ಅವರು ಧಾರ್ಮಿಕ ಉಪನ್ಯಾಸ ನೀಡಿ  ನಾವು ಇನ್ನೂ ಏನೇ ಮಾಡಿದರು ರಾಮ ಮತ್ತೆ ಹುಟ್ಟಿ  ಬರಲಾರ ಆದರೆ ರಾಮನ ಗುಣಗಳಿರುವ ಮಕ್ಕಳು ಹುಟ್ಟಿ ಬರಬಹುದು ಅಂತಹ ಸತ್ಪುರುಷರನ್ನು ಪಡೆಯುವುದೇ ನಮ್ಮ ಉದ್ದೇಶವಾಗಲಿ ಅದರಿಂದ ನಮ್ಮ ಧರ್ಮ ನಮ್ಮ ದೇಶ ಬೆಳಗುವಂತಾಗಲಿ ಎಂದು ಹಾರೈಸಿದರು.ಯಾಗ ಸಮಿತಿ ಅಧ್ಯಕ್ಷ ರಘುನಾಥ್ ಪೈ ಕುಂಬಳೆ ಉಪಸ್ಥಿತರಿದ್ದರು.

ಸಭೆಯಲ್ಲಿ  ಯೋಗಾಚಾರ್ಯ ಪುಂಡರೀಕಾಕ್ಷ  ಬೆಳ್ಳೂರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ   ಯೋಗ, ಯಾಗ, ಆಯುರ್ವೇದ ಜಗತ್ತಿಗೆ ಭಾರತ ನೀಡಿದ ಕೊಡುಗೆ ಇದರ ಮುಖಾಂತರ ಮನಸ್ಸು, ಶರೀರ,  ಬುದ್ಧಿಯನ್ನು ಆರೋಗ್ಯಪೂರ್ಣವಾಗಿ ಇರಿಸಬಹುದು, ಹಿತಮಿತ ಋತ ಆಹಾರ ಸೇವನೆ,  ನಿತ್ಯ ಅಗ್ನಿಹೋತ್ರ ,   ನಾಮ ಜಪ , ಪ್ರಾಣಾಯಾಮ  ಯೋಗಾಸನಗಳ ಸಾಧನೆಯಿಂದ ನಮ್ಮ ಮನೆಯನ್ನು ಸ್ವರ್ಗವಾಗಿಸಬಹುದು ಇದಕ್ಕೆ ಧನ್ವಂತರಿ ,ಪುತ್ರಗಾಮೆಷ್ಟಿಯಾಗ ಹೊಸ ದಿಕ್ಕನ್ನು ಕೊಡುವಂತೆ ಆಗಲಿ ಎಂದು ಪ್ರಾರ್ಥಿಸಿದರು.

ಮಂಜುನಾಥ ಮಾನ್ಯ ಸ್ವಾಗತಿಸಿ ಗಣೇಶ ವತ್ಸ ವಂದಿಸಿದರು.  ಸಭೆಯಲ್ಲಿ  ಯೋಗಾಚಾರ್ಯ ಪುಂಡರೀಕಾಕ್ಷ  ಬೆಳ್ಳೂರು ಅವರನ್ನು ಸಭೆಯಲ್ಲಿ ಗಂಗಾಧರ ರೈ ಮಾಸ್ಟರ್  ಮವ್ವಾರು ಗೌರವಿಸಿದರು.  ಲೋಕೇಶ್ ಎಂ.ಬಿ ಆಚಾರ್ ಕಂಬಾರು ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments