ಹೊಸದಿಲ್ಲಿ: 'ಆಪರೇಷನ್ ಸಿಂದೂರ್' ದಾಳಿಯಲ್ಲಿ ಭಾರತವು ಅತ್ಯಂತ ದೊಡ್ಡ ಕುಳನನ್ನೇ ಹೊಡೆದುರುಳಿಸಿದೆ. ಕಂದಹಾರ್ ವಿಮಾನ ಅಪಹರಣದ ಮಾಸ್ಟರ್ ಮೈಂಡ್ ಜೈಶ್-ಎ-ಮೊಹಮ್ಮದ್ ಕಮಾಂಡರ್. ಅಬ್ದುಲ್ ರೌಫ್ ಅಜರ್ ಭಾರತದ ಕ್ಷಿಪಣಿ ದಾಳಿಗೆ ಸತ್ತಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಇಂದು (ಗುರುವಾರ) ಉನ್ನತ ಗುಪ್ತಚರ ಮೂಲಗಳು ದೃಢಪಡಿಸಿವೆ. ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ನ ಕಿರಿಯ ಸಹೋದರ ಅಜರ್, 1999 ರಲ್ಲಿ ಇಂಡಿಯನ್ ಏರ್ ಲೈನ್ಸ್ ವಿಮಾನ I ಅಪಹರಣದ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ. ಈತನನ್ನು ದಶಕಗಳಿಂದ ಭಾರತೀಯ ಗುಪ್ತಚರ ಸಂಸ್ಥೆಗಳು ಟ್ರ್ಯಾಕ್ ಮಾಡುತ್ತಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗೆ ಮೋಸ್ಟ್ ವಾಂಟೆಡ್ ವ್ಯಕ್ತಿಗಳಲ್ಲಿ ಒಬ್ಬನಾಗಿರುವ ಅಬ್ದುಲ್ ರೌಫ್ ಅಜರ್ ಹತ್ಯೆ ಭಾರತದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಅಬ್ದುಲ್ ರೌಫ್ ಅಜರ್ ಕಂದಹಾರ್ ಅಪಹರಣ ಮಾತ್ರವಲ್ಲದೆ 2001ರ ಭಾರತೀಯ ಪಾರ್ಲಿಮೆಂಟ್ ದಾಳಿ, 2003ರ ನಗೋಟಾ ಸೇನಾ ಶಿಬಿರ ದಾಳಿ, 2019ರ ಪುಲ್ವಾಮಾ ದಾಳಿ ಸೇರಿ ಹಲವು ಕುಕೃತ್ಯಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ.
ಕೃತ್ಯಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ. ಮಂಗಳವಾರ ತಡರಾತ್ರಿ ಭಾರತವು ಒಂಬತ್ತು ಉಗ್ರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿತ್ತು. ಜೈಶ್ ಎ ಮೊಹಮ್ಮದ್ ನ ಕಾರ್ಯಾಚರಣೆ ಶಿಬಿರದಲ್ಲಿದ್ದ ಅಬ್ದುಲ್ ರೌಫ್ ಅಜರ್ ಈ ವೇಳೆ ಹತನಾಗಿದ್ದಾನೆ ಎಂದು ವರದಿಯಾಗಿದೆ. ಈತನ ಹತ್ಯೆಯು ಭಯೋತ್ಪಾದಕತೆಯನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆಯಾಗಿದೆ.

0 Comments