Ticker

6/recent/ticker-posts

Ad Code

ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಮದ್ಯವಯಸ್ಕ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ


 ಬದಿಯಡ್ಕ: ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಮದ್ಯವಯಸ್ಕರಾದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ‌ಮುಂಡಿತ್ತಡ್ಕ‌ ಪಳ್ಳಂ ನಿವಾಸಿ ಯೂಸೆಫ್(77) ಆತ್ಮಹತ್ಯೆಗೈದ ವ್ಯಕ್ತಿ. ನಿನ್ನೆ (ಬುದವಾರ) ಸಂಜೆ ಈ ಘಟನೆ ‌ನಡೆದಿದೆ. ಮನೆಯಲ್ಲಿ ನಡೆದ ‌ಮದುವೆ ಸಮಾರಂಭದ ಖರ್ಚಿಗಾಗಿ 35 ಲಕ್ಷ ರೂ ಹಣಕಾಸು ಸಂಸ್ಥೆಯೊಂದರಿಂದ ಸಾಲ‌ ಪಡೆಯಲಾಗಿತ್ತು. ಹಣ ಮರು ಪಾವತಿಸಲು ಸಾಧ್ಯವಾಗಿರಲಿಲ್ಲ. ಹಣಕಾಸು ಸಂಸ್ಥೆಯ ಪ್ರತಿನಿಧಿಗಳು ಎರಡು ದಿನಗಳ ಹಿಂದೆ ಮನೆಗೆ ಬಂದು ಬೆದರಿಕೆ ಹಾಕಿರುವುದಾಗಿಯೂ ತಿಳಿದು ಬಂದಿದೆ. ಇದೇ ಕಾರಣದಿಂದ ಯೂಸುಫ್ ಆತ್ಮಹತ್ಯೆಗೈದಿರಬೇಕು ಎಂದು ಸಂಕಿಸಲಾಗಿದೆ. ಇವರ ಪತ್ನಿ ಮರಿಯಮ್ಮ ಈ ಹಿಂದೆಯೇ ನಿಧನರಾಗಿದ್ದರು. ಮೃತರು‌ ಮಕ್ಕಳಾದ  ಫಾತಿಮ, ಅಬ್ದುಲ್ ಖಾದರ್, ಕದೀಜ, ರುಕಿಯ, ನಸೀಮ, ಮಿಸ್ರಿಯ, ಆಮಿನ, ಅಲೀಮ,ಅವ್ವಾಬಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments