Ticker

6/recent/ticker-posts

Ad Code

ಬಿಎಂಎಸ್ ಜಿಲ್ಲಾ ಸಮಿತಿ‌ ನಿರ್ಮಿಸಿದ‌ ಮನೆಯ ಬೀಗದ ಕೈ ಹಸ್ತಾಂತರ


 ಕಾಸರಗೋಡು: ‌ಕುಟುಂಬದ ಆಧಾರಸ್ಥಂಭವಾಗಿದ್ದ ಇಬ್ಬರು ಗಂಡು ಮಕ್ಕಳನ್ನು ಕಳಕೊಂಡ ತಾಯಿ ಹಾಗೂ ಮಗಳಿಗೆ ಬಿಎಂಎಸ್ ಆಸರೆ. ಮಾನವ ಸೇವಾ ಮಾಧವ ಸೇವಾ ಎಂಬ ಸಂದೇಶದಂತೆ ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ‌ಕೂಡ್ಲು ಪಚ್ಚಕ್ಕಾಡ್ ಎಂಬಲ್ಲಿ ವೀಣ ಕುಮಾರಿ ಹಾಗೂ ಮಗಳಿಗಾಗಿ ನಿರ್ಮಿಸಿದ ಮನೆಯ ಬೀಗದ ಕೈ ಹಸ್ತಾಂತರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾಸರಗೋಡು ಜಿಲ್ಲಾ ಸಂಘ ಚಾಲಕ  ಪ್ರಭಾಕರನ್ ಮಾಸ್ತರ್ ನೆರವೇರಿಸಿದರು.
 ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಅಡ್ವ.ಪಿ.ಮುರಳೀಧರನ್, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು, ಜಿಲ್ಲಾ ಉಪಾಧ್ಯಕ್ಷ ಉಪೇಂದ್ರ ಕೋಟಕಣಿ,  ಜಿಲ್ಲಾ ಜತೆ ಕಾರ್ಯದರ್ಶಿಗಳಾದ ಗುರು ದಾಸ್ ಮಧೂರು, ಹರೀಶ್ ಕುದ್ರೆಪ್ಪಾಡಿ, ಗೀತಾ ಬಾಲಕೃಷ್ಣ,  ವಲಯ ಅಧ್ಯಕ್ಷ ಬಾಲಕೃಷ್ಣ ನೆಲ್ಲಿಕುನ್ನು, ವಲಯ ಕಾರ್ಯದರ್ಶಿ ಬಾಬು ಮೋನ್ ಚೆಂಗಳ,‌ಮಧೂರು ಗ್ರಾಮ‌ಪಂಚಾಯತು ಅಧ್ಯಕ್ಷ ಕೆ.ಗೋಪಾಲಕೃಷ್ಣ, ಬಿಜೆಪಿ ಮುಖಂಡ ಪಿ.ರಮೇಶ್, ಗ್ರಾಮ ಪಂಚಾಯತು ಸದಸ್ಯೆ ರಾಧ ಮೊದಲಾದವರು ಉಪಸ್ಥಿತರಿದ್ದರು

Post a Comment

0 Comments