ಮೀನಿನ ಪದಾರ್ಥ ಸೇವಿಸಿದ ಮಹಿಳೆ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಇವರ ಪತಿ ಹಾಗೂ ಪುತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಕೊಲ್ಲಂ ಕಾವನಾಡ್ ನಿವಾಸಿ ಶ್ಯಾಂ ಕುಮಾರ್ ಎಂಬವರ ಪತ್ನಿ ದೀಪ್ತಿ ಪ್ರಭ(45) ಮೃತಪಟ್ಟ ಮಹಿಳೆ. ಖಾಸಗಿ ಬ್ಯಾಂಕಿನ ಉದ್ಯೋಗಿಯಾಗಿರುವ ಇವರು ಮಂಗಳವಾರ ರಾತ್ರಿ ಮೀನಿನ ಪದಾರ್ಥ ಸೇವುಸಿದ್ದರು. ಇವರ ಪತಿ ಹಾಗೂ ಪುತ್ರ ಅರ್ಜುನ್ ಸಹ ಮೀನಿನ ಪದಾರ್ಥ ಸೇವಿಸಿದ್ದರು. ನಿನ್ನೆ(ಬುದವಾರ) ಬೆಳಗ್ಗೆ ಪತಿ ಹಾಗೂ ಪುತ್ರನಿಗೆ ವಾಂತಿ ಆರಂಭಗೊಂಡಿದ್ದು ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಯಿತು. ನಿನ್ನೆ ಸಾಯಂಕಾಲ ದೀಪ್ತಿ ಪ್ರಭಾಳಿಗೆ ವಾಂತಿ ಶುರುವಾಗಿದ್ದು ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆ ಮೃತಪಟ್ಟಿದ್ದರು. ಫುಡ್ ಪಾಯ್ಸನ್ (ಆಹಾರ ವಿಷ) ಕಾರಣವಿರಬೇಕೆಂದು ಸಂಶಯಿಸಲಾಗಿದೆ
0 Comments