Ticker

6/recent/ticker-posts

Ad Code

ಜೈವ ವೈವಿದ್ಯ ಸಂರಕ್ಷಣೆ ಪ್ರಬಂದಕ್ಕೆ ಬೇಳದ ಕುವರಿ ನೆಹಾರಿಕ.ಡಿಗೆ ಜಿಲ್ಲಾ ಮಟ್ಟದ ಪ್ರಥಮ‌ ಬಹುಮಾನ


ಬದಿಯಡ್ಕ : ಕೇರಳ ರಾಜ್ಯ ಜೈವಿಕ ವೈವಿಧ್ಯ ಬೋರ್ಡ್ ನಡೆಸಿದ 17ನೇ  ವಿದ್ಯಾರ್ಥಿ  ಜೈವ ವೈವಿಧ್ಯ ಸಮ್ಮೇಳನದ ಅಂಗವಾಗಿ ಮನೆಯ ಸುತ್ತ ಮುತ್ತಲಿನ ಜೈವ ವೈವಿದ್ಯ ಸಂರಕ್ಷಣೆ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದ ಬೇಳ ನಿವಾಸಿಯಾದ ವಿದ್ಯಾರ್ಥಿನಿ ನೆಹಾರಿಕ .ಡಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. 

ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿದ ಈಕೆ ಬೇಳ ಸಂತ ಬಾರ್ತಲೋಮಿಯ ಹಿರಿಯ ಬುನಾದಿ ಶಾಲೆಯಲ್ಲಿ ಕಲಿಯುತ್ತಿರುವ ಏಳನೇ ತರಗತಿ ವಿದ್ಯಾರ್ಥಿನಿ. ಬೇಳ ದರ್ಬೆತ್ತಡ್ಕದ ಗೋಪಾಲಕೃಷ್ಣ - ಆಶಾ ಕಿರಣ ದಂಪತಿಗಳ ಪುತ್ರಿಯಾದ ಈಕೆ ತಿರುವನಂತಪುರದಲ್ಲಿ ನಡೆದ 17ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಜೈವ ವೈವಿಧ್ಯ ಸಮ್ಮೇಳನದಲ್ಲಿ   ಕಾಸರಗೋಡು ಜಿಲ್ಲೆಯಿಂದ ಭಾಗವಹಿಸಿದ ನೆಹಾರಿಕ.ಡಿ ಅವರನ್ನು ಅಂಬೇಡ್ಕರ್ ವಿಚಾರ ವೇದಿಕೆಯು  ಅಭಿನಂದಿಸಿದೆ.

Post a Comment

0 Comments