Ticker

6/recent/ticker-posts

Ad Code

ಸ್ನಾನ ಮಾಡುವ ವೇಳೆ ಕುಸಿದು ಬಿದ್ದ ಅಸ್ಸಾಂ‌ ನಿವಾಸಿ ಆಸ್ಪತ್ರೆಯಲ್ಲಿ‌ ಮೃತ್ಯು


 ಸೀತಾಂಗೋಳಿ: ಸ್ನಾನ ಮಾಡುವ ವೇಳೆ ಕುಸಿದು ಬಿದ್ದ ಅಸ್ಸಾಂ ನಿವಾಸಿ ಆಸ್ಪತ್ರೆಯಲ್ಲಿ ‌ಮೃತಪಟ್ಟ ಘಟನೆ ನಡೆದಿದೆ. ಅಸ್ಸಾಂ ಚಿರಾಗ್ ಜಿಲ್ಲೆತ ಶಂಸೀರ್ ಅಲಿ(30) ಮೃತಪಟ್ಟ ಕಾರ್ಮಿಕ. ಇವರು ಸೀತಾಂಗೋಳಿಯಲ್ಲಿ ಕೆಂಪು ಕಲ್ಲು ಕೋರೆಯಲ್ಲಿ ಕಾರ್ಮಿರಾಗಿದ್ದಾರೆ. ಸೀತಾಂಗೋಳಿ ಬಿವರೇಜಸದ ಮದ್ಯದಂಗಡಿ ಕಾರ್ಯಾಚರಿಸುತ್ತಿರುವ ಕಟ್ಟಡದ ಮೇಲ್ಭಾಗದಲ್ಲಿ ಕುಟುಂಬ ಸದಸ್ಯರ ಜತೆ ಇವರು ವಾಸಿಸುತ್ತಿದ್ದರು. ಮಂಗಳವಾರ ಬೆಳಗ್ಗೆ ಇವರು ಸ್ನಾನ‌ ಮಾಡುತ್ತಿರುವ ವೇಳೆ ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತು. ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದರು. ಇದೇ ಕ್ವಾಟರ್ಸಿನಲ್ಲಿ ವಾಸಿಸುತ್ತಿದ್ದ ಅನ್ಯ ರಾಜ್ಯ ಕಾರ್ಮಿಕರೋರ್ವರು ಇತ್ತೀಚೆಗೆ ಮೃತಪಟ್ಟಿದ್ದರು

Post a Comment

0 Comments