Ticker

6/recent/ticker-posts

Ad Code

ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕ ವಕ್ವಾಡಿಯವರ ಹೆತ್ತವರ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ 13ನೇ ವರ್ಷದ ಮಹಾ ರಕ್ತದಾನ ಶಿಬಿರ


ದುಬೈ :
ಯುಎಇಯಲ್ಲಿ ಹಾಗೂ ಕರಾವಳಿಯಲ್ಲಿ ಹೆಸರು ವಾಸಿಯಾಗಿರುವ ಹೋಟೆಲ್ ಉದ್ಯಮ ಸಂಸ್ಥೆ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಕಳೆದ 13 ವರ್ಷದಿಂದ ತನ್ನ ಮಾತೃ ಪಿತರ ಮದುವೆಯ ವಾರ್ಷಿಕ ದಿನದಂದು ದುಬೈನಲ್ಲಿ ನಡೆಸಿಕೊಂಡು ಬರುತಿರುವ ರಕ್ತದಾನ ಶಿಬಿರದ ಕಾರ್ಯಕ್ರಮ ನಗರದ ಫಾರ್ಚೂನ್ ಪ್ಲಾಝದಲ್ಲಿ ಯಶಸ್ವಿಯಾಗಿ ನಡೆಯಿತು. 

ದುಬೈ ಹೆಲ್ತ್ ಅಥೋರಿಟಿಯ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರ ವರೆಗೆ ಯಶಸ್ವಿಯಾಗಿ ಜರುಗಿತು. ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಸಿಬ್ಬಂದಿ ವರ್ಗದವರು ದುಬೈ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಪ್ರವೀಣ್ ಶೆಟ್ಟಿಯವರ ಸ್ನೇಹಿತರು ಶಿಬಿರದಲ್ಲಿ ರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಗೊಳಿಸಿದರು.
    

  ಮಾಧ್ಯಮದೊಂದಿಗೆ ಮಾತನಾಡಿದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ನನ್ನ ಮಾತ ಪಿತರಾದ ಶ್ರೀಮತಿ ಸರೋಜಿನಿ ಶೆಟ್ಟಿ ಮತ್ತು ಶ್ರೀ ನಾರಾಯಣ ಶೆಟ್ಟಿಯವರ ಮದುವೆಯ ವರ್ಷದ ಈ ಶುಭ ದಿನದಂದು ಕಳೆದ ಹದಿಮೂರು ವರ್ಷಗಳಿಂದ ಈ ಕಾರ್ಯಕ್ರಮವನ್ನು ದುಬೈನಲ್ಲಿ ಆಚರಿಸಿಕೊಂಡು ಬರುತ್ತಿದ್ದೆನೆ.ಈ ವರ್ಷ ನನಗೆ ವಿಶೇಷ ವರ್ಷ ನನ್ನ ಪೋಷಕರು ವೈವಾಹಿಕ ಜೀವನಕ್ಕೆ ಕಾಲಿಟ್ಟು 60ನೇ ವರ್ಷ ಆಚರಿಸುತಿದ್ದರೆ.ಇಂದು ನಾವು ದಾನ ಮಾಡಿದ ಪ್ರತಿ ಹನಿ ರಕ್ತವು ನಾಳೆಯ ಜೀವವನ್ನು ಉಳಿಸುವ ಶಕ್ತಿಯನ್ನು ಹೊಂದಿದೆ.ನನ್ನ ಈ ರಕ್ತದಾನ ಶಿಬಿರಕ್ಕೆ ಕೈ ಜೋಡಿಸಿ ನಿಂತ ನನ್ನ ಎಲ್ಲ ಸಿಬ್ಬಂದಿಗಳು,ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ನನ್ನ ಸ್ನೇಹಿತರಿಗೆ ಹಾಗೂ ರಕ್ತದಾನ ಮಾಡಿದ ಎಲ್ಲ ರಕ್ತದಾನಿಗಳಿಗೆ ಧನ್ಯವಾದ ತಿಳಿಸಿದರು. 

  ದುಬೈ ಹೆಲ್ತ್ ಅಥೋರಿಟಿಯ ಸಿಬ್ಬಂದಿ ವರ್ಗದವರ ಮಾತನಾಡುತ್ತಾ *ಕಳೆದ ಕೆಲವು ವರ್ಷಗಳಿಂದ ಫಾರ್ಚೂನ್ ಗ್ರೂಪ್ ಸಂಸ್ಥೆಯ ಸದಸ್ಯರು ರಕ್ತದಾನ ಮಾಡುತ್ತ ಇದ್ದರೆ.ವರ್ಷದಿಂದ ವರ್ಷಕ್ಕೆ ದಾಖಲೆಯ ಸಂಖ್ಯೆಯಲ್ಲಿ ರಕ್ತದಾನ ಮಾಡುವ ದಾನಿಗಳಿಗೆ ಶುಭವನ್ನು ಹಾರೈಸಿ  ಸಂಸ್ಥೆಯನ್ನು ಶ್ಲಾಘಿಸಿದರು.*
    

   ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ರಕ್ತದಾನ ಶಿಬಿರದ ಯಶಸ್ವಿ ಸಂಘಟಕ ಬಾಲಕೃಷ್ಣ ಸಾಲಿಯಾನ್ ನವರ ನೇತೃತ್ವದಲ್ಲಿ ಶಿಬಿರವು ಯಶಸ್ವಿಯಾಗಿ ನಡೆಯಿತು.
   

   ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಯುಎಇ ಬಂಟ್ಸ್ ನ ರಮಾನಂದ ಶೆಟ್ಟಿ, ವಾಸು ಶೆಟ್ಟಿ, ವಸಂತ ಶೆಟ್ಟಿ,ಕನ್ನಡಿಗರು ಕನ್ನಡ ಕೂಟ ದುಬೈಯ ಸಾದನ್ ದಾಸ್, ಕರ್ನಾಟಕ ಸಂಘ ದುಬೈಯ ಶಶಿಧರ್ ನಾಗರಾಜಪ್ಪ,ನಾಗರಾಜ ರಾವ್ ಉಡುಪಿ,ಪರ್ವ ಗ್ರೂಪ್ ನ ನೀಲೇಶ್ ಎಚ್.ಪಿ,ಯಕ್ಷಗಾನ ಅಭ್ಯಾಸ ಕೇಂದ್ರದ ಸಂದೀಪ್ ಶೆಟ್ಟಿ ಕೊಟ್ಟಿಂಜ,ಗಮ್ಮತ್ ಕಲಾವಿದೆರ್ ನ ರಾಜೇಶ್ ಕುತ್ತಾರ್,ಪತ್ರಕರ್ತರು ಅಂಕಣಕಾರರಾದ ಇರ್ಷಾದ್ ಮೂಡಬಿದಿರೆ, ವಿಜಯಕುಮಾರ್ ಶೆಟ್ಟಿ ಗಾಣದಮೂಲೆರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ಶಿಬಿರಕ್ಕೆ ಶುಭವನ್ನು ಹಾರೈಸಿದರು.
     ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಪ್ರಾಚಿ ಶೆಟ್ಟಿಯವರು ಸ್ವಾಗತಿಸಿ ಧನ್ಯವಾದವಿತ್ತರು.
🖋️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

Post a Comment

0 Comments