Ticker

6/recent/ticker-posts

Ad Code

ಕಾಸರಗೋಡು ನಗರದಲ್ಲಿ ಬಸ್ಸುಗಳು ಪರಸ್ಪರ ಡಿಕ್ಕಿ ಹೊಡೆದು 12 ಮಂದಿಗೆ ಗಾಯ


 ಕಾಸರಗೋಡು: ಕಾಸರಗೋಡು ಪೇಟೆಯಲ್ಲಿ ಬಸ್ಸುಗಳು ಪರಸ್ಪರ ಡಿಕ್ಕಿ ಹೊಡೆದು 12 ಮಂದಿ ಗಾಯಗೊಂಡಿದ್ದಾರೆ. ನಗರ ಪೊಲೀಸ್ ಠಾಣಾ ಮುಂಭಾಗದಲ್ಲಿ ಇಂದು (ಆದಿತ್ಯವಾರ) ಸಾಯಂಕಾಲ 4.30 ಕ್ಕೆ ಅಫಘಾತ ಉಂಟಾಗಿದೆ. ಆಲಂಪಾಡಿಯಿಂದ ನೆಲ್ಲಿಕುನ್ನು ಭಾಗಕ್ಕೆ ಸಾಗುತ್ತಿದ್ದ  ಮದುವೆ ಸಮಾರಂಭದ ಟ್ಯೂರಿಸ್ಟ್ ಬಸ್ಸು ಹಾಗೂ ಕಾಸರಗೋಡಿನಿಂದ ಮಧೂರಿಗೆ ಸಾಗುತ್ತಿದ್ದ ಸರ್ವೀಸ್ ಬಸ್ಸು ಪರಸ್ಪರ ಡಿಕ್ಕಿ ಹೊಡೆದಿದೆ. ಅಗ್ನಿಶಾಮಕ ದಳ ಸಿಬಂದಿಗಳು ಆಗಮಿಸಿ ಗಾಯಗೊಂಡವರನ್ನು ಹೊರಗೆ ತೆಗೆದರು. ಬಸ್ಸು ಚಾಲಕ ಕಮಲಾಕ್ಷ, ಮನ್ನಪ್ಪಾಡಿಯ ಸ್ವಪ್ನ, ಆಲಂಪಾಡಿಯ ಮುಸ್ತಪಲ, ಪಟ್ಲದ ಅಬ್ಬಾಸ್, ಟ್ಯೂರಿಸ್ಟ್ ಬಸ್ಸು ಚಾಲಕ ಸಫೀರ್, ಆಲಂಪಾಡಿಯ ರಹಮಾನ್, ಮೀಪುಗುರಕಯ ಸುರೇಶ್, ಉಳಿಯತ್ತಡ್ಕದ ಸರಸ್ವತಿ ಎಂಬವರು ಗಾಯಗೊಂಡಿದ್ದಾರೆ

Post a Comment

0 Comments