ಪುತ್ತೂರು: ಪುತ್ತೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಇತರ ಪ್ರಯಾಣಿಕರು ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಬೆಟ್ಟಂಪಾಡಿ ನಿವಾಸಿ ಅಬ್ದುಲ್ ಕುಂಞ ಪ್ರಕರಣದ ಆರೋಪಿ. ಈತ ಪುತ್ತೂರಿನಿಂದ ಸುಳ್ಯಕ್ಕೆ ತೆರಳುವ ಬಸ್ ಹತ್ತಿದ್ದನೆನ್ನಲಾಗಿದೆ. ಬಸ್ಸು ಜಾಲ್ಲೂರು ತಲುಪಿದಾಗ ಸೋಮವಾರಪೇಟೆಯ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಬಾಲಕಿಯ ದೇಹವನ್ನು ಸ್ಪರ್ಶಿಸಲು ಯತ್ನಿಸಿ ಅನುಚಿತವಾಗಿ ವರ್ತಿಸಿದ್ದನು.
ಬಾಲಕಿ ಪ್ರತಿಭಟಿಸಿ ,ತನ್ನ ಕುಟುಂಬ ಸದಸ್ಯರಿಗೆ ವಿಷಯ ತಿಳಿಸಿದಳು. ಇದನ್ನು ಗಮನಿಸಿದ ಇತರ ಪ್ರಯಾಣಿಕರು ಆರೋಪಿಯನ್ನು ಹಿಡಿದು, ತಕ್ಷಣ ಪೊಲೀಸರಿಗೆನೀಡಿದರು. ಬಸ್ಸು ಸುಳ್ಯ ಕೆಎಸ್‌ಆರ್ಟಿಸಿ ನಿಲ್ದಾಣವನ್ನು ತಲುಪಿದಾಗ, ಸುಳ್ಯ ಪೊಲೀಸರು ಆಗಮಿಸಿ ಆರೋಪಿ ಅಬ್ದುಲ್ ಕುಂಞನನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಆರೋಪಿಯನ್ನು
ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ರಿಮಾಂಡ್ ವಿಧಿಸಲಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಸುಳ್ಯ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು.
0 Comments