Ticker

6/recent/ticker-posts

ಕನ್ನೆಪ್ಪಾಡಿಯಲ್ಲಿ ಬೈಕ್ ಹಾಗೂ ಪಿಕಪ್ ವ್ಯಾನು ಡಿಕ್ಕಿ ಹೊಡೆದು ಇಬ್ಬರಿಗೆ ಗಂಭೀರ ಗಾಯ


 ಬದಿಯಡ್ಕ: ಬೈಕು ಹಾಗೂ ಪಿಕಪ್ ವ್ಯಾನು ಪರಸ್ಪರ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ. ಬಾಂಜತ್ತಡ್ಕ ನಿವಾಸಿ ಅಭಿಷೇಕ್(24), ಮೊಗ್ರಾಲು ನಿವಾಸಿ ರಾಹುಲ್ (23) ಗಾಯಗೊಂಡವರುಮ ಇಂದು (ಮಂಗಳವಾರ) ಸಂಜೆ ಐದೂವರೆ ಗಂಟೆಯ ವೇಳೆ ಕುಂಬಳೆ- ಬದಿಯಡ್ಕ ರಸ್ತೆಯ ಕನ್ನೆಪ್ಪಾಡಿಯಲ್ಲಿ ಈ ಅಫಘಾತ ನಡೆದಿದೆ. ಬದಿಯಡ್ಕ ಭಾಗದಿಂದ ನೀರ್ಚಾಲು ಕಡೆಗೆ ಸಾಗುತ್ತಿದ್ದ ಪಿಕಪ್ ವ್ಯಾನು ಹಾಗೂ ಬದಿಯಡ್ಕ ಭಾಗಕ್ಕೆ ಸಾಗುತ್ತಿದ್ದ ಬೈಕು ಪರಸ್ಪರ ಡಿಕ್ಕಿ ಹೊಡೆದಿದೆ. ಅಫಘಾತದಲ್ಲಿ ರಸ್ತೆಗೆಸೆಯಲ್ಪಟ್ಟ ಅಭಿಷೇಕ್ ಹಾಗೂ ರಾಹುಲ್ ರನ್ನು  ಸ್ಥಳೀಯರು ಚೆರ್ಕಳ ಕೆ.ಕೆ.ಪುರಂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರೂ ಚೇತರಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Post a Comment

0 Comments