ಏತಡ್ಕ: ಇಲ್ಲಿನ ಶಾಲೆ ಅಡ್ಕ ಬಳಿಯ ಬಾಲಕೃಷ್ಣ ಎಂಬವರ ಮನೆಯ ಪರಿಸರದಲ್ಲಿ ಕಟ್ಟಿ ಹಾಕಿದ್ದ ಆಡುಗಳ ಮೇಲೆ ಅಪರಿಚಿತ ಪ್ರಾಣಿಯ ದಾಳೆ ನಡೆದಿದೆ. ದಾಳಿಯಿಂದಾಗಿ ಒಂದು ಆಡಿಗೆ ಗಾಯಗಳಾಗಿವೆ. ಬಾಲಕೃಷ್ಣರಿಗೆ ಐದು ಆಡುಗಳಿದ್ದು ಮೂರು ಆಡು ಗೂಡಿನೊಳಗೂ ಎರಡನ್ನು ಹೊರಗೂ ಕಟ್ಟಿ ಹಾಕಲಾಗಿತ್ತು. ರಾತ್ರಿ 1.30 ರ ವೇಳೆ ಹಾಗೂ 3 ಗಂಟೆಯ ನಂತರ ಅಪರಿಚಿತ ಪ್ರಾಣಿಯ ದಾಳಿ ನಡೆದಿದೆ. ಆಡಿನ ಬೊಬ್ಬೆ ಕೇಳಿ ಮನೆಯವರು ಹೊರಬಂದಾಗ ಯಾವುದೇ ಪ್ರಾಣಿ ಕಂಡು ಬರಲಿಲ್ಲ.
ಕಳೆದ ವರ್ಷವಷ್ಟೇ ಇಲ್ಲಿಗೆ ಸಮೀಪದ ವ್ಯಕ್ತಿಯೋರ್ವರ ಸಾಕು ನಾಯಿ ಮೇಲೆ ಇದೇ ರೀತಿ ಯಾವುದೋ ಜೀವಿ ದಾಳಿ ನಡೆಸಿ ಗಾಯಗೊಳಿಸಿತ್ತು. ಕೇವಲ ಗಾಯಗೊಳಿಸಿದ ಕಾರಣ ಇದು ಚಿರತೆ ದಾಳಿಯಾಗಿರದು ಎಂದು ಸ್ಥಳೀಯರು ತಿಳಿಸಿದ್ದಾರೆ.
0 Comments