Ticker

6/recent/ticker-posts

ಮನೆಯ ಹಿಂಬಾಗಿಲು‌ ಮುರಿದು ಮಲಗುವ‌ ಕೋಣೆಯ ಕಪಾಟು ಒಡೆದು 8 ಪವನು ಚಿನ್ನಾಭರಣ, 1 ಲಕ್ಷ ರೂ ದರೋಡೆ, ಪೆರ್ಲ ಇಡಿಯಡ್ಕದಲ್ಲಿ ನಡೆದ ಘಟನೆ


 ಪರ್ಲ: ಮನೆಯ ಹಿಂಬಾಗಿಲು‌ ಮುರಿದು ಕಪಾಟಿನಲ್ಲಿದ್ದ 8 ಪವನು ಚಿನ್ನಾಭರಣ, 1 ಲಕ್ಷ ರೂ ದರೋಡೆಗೈದ ಘಟನೆ ‌ನಡೆದಿದೆ. ಪೆರ್ಲ ಇಡಿಯಡ್ಕದಲ್ಲಿರುವ ಅಬ್ಬಾಸ್ ಅಲಿ ಎಂಬವರ ಮನೆಯಲ್ಲಿ ಸೋಮವಾರ ರಾತ್ರಿ 12 ಗಂಟೆಯ ನಂತರ ಈ ದರೋಡೆ ನಡೆದಿದೆ.  ಮನೆಯ ಹಿಂಬಾಗದ ಎರಡು ಬಾಗಿಲುಗಳನ್ನು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಮಲಗುವ ಕೋಣೆಯ ಬಾಗಿಲು ಮುರಿದು ಕಪಾಟು ಒಡೆದು ಚಿನ್ನಾಭರಣ, ನಗದು ದೋಚಿದ್ದಾರೆ. ಮನೆಯವರು ಮಂಗಳೂರಿನಲ್ಲಿ ನಡೆದ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಬೆಳಗ್ಗೆ ಕಾವಲುಗಾರ ನೀಡಿದ ಮಾಹಿತಿಯಂತೆ ಬಂದು ನೋಡಿದಾಗ ದರೋಡೆ ಪ್ರಕರಣ ತಿಳಿಯಿತು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಒಟ್ಟು 6 ಲಕ್ಷ ರೂ.ಗಳ ನಷ್ಟ ಉಂಟಾಗಿದೆ.

Post a Comment

0 Comments