Ticker

6/recent/ticker-posts

ತಮಿಳುನಾಡು ನಿವಾಸಿಯಾದ ಕುಡುಕ ಅಂಗಡಿಗೆ‌ ನುಗ್ಗಿ ಥಿನ್ನರ್ ಎರಚಿ‌ ಕಿಚ್ಚಿಕ್ಕಿ ಗಂಭೀರ ಗಾಯಗೊಂಡ ಮಹಿಳೆ‌ ಮಂಗಳೂರು ಆಸ್ಪತ್ರೆಯಲ್ಲಿ‌ ಮೃತ್ಯು


 ಕಾಸರಗೋಡು: ತಮಿಳುನಾಡು ‌ನಿವಾಸಿಯಾದ ಕುಡುಕ ಅಂಗಡಿಗೆ‌ ನುಗ್ಗಿ ಥಿನ್ನರ್ ಎರಚಿ ಕಿಚ್ಚಿಕ್ಕಿ ಗಂಭೀರ ಗಾಯಗೊಂಡು‌ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾದ ಮಹಿಳೆ  ಮೃತಪಟ್ಟ ಘಟನೆ ‌ನಡೆದಿದೆ. ಬೇಡಗಂ ಪೇಟೆಯಲ್ಲಿ ದಿನಸಿ ವ್ಯಾಪಾರ ‌ನಡೆಸುತ್ತಿರುವ ಮುನ್ನಾಡ್ ಪೇರಿಯ ನಿವಾಸಿ ರಮಿತ(27) ಮೃತಪಟ್ಟ ಮಹಿಳೆ. ಇಂದು‌(ಮಂಗಳವಾರ) ಬೆಳಗ್ಗೆ ಅವರು ಕೊನೆಯುಸಿರೆಳೆದರು.

    ಈ ಪ್ರಕರಣಕ್ಕೆ ಸಂಬಂದಪಟ್ಟಂತೆ ತಮಿಳುನಾಡು ಚಿನ್ನಪಟ್ಟಣಂ ನಿವಾಸಿ ರಾಮಾಮೃತಂ(57) ನನ್ನು ಬಂಧಿಸಲಾಗಿದೆ. ರಮಿತಳ ದಿನಸಿ ಅಂಗಡಿಯ ಪರಿಸರದಲ್ಲಿ ರಾಮಾಮೃತಂ  ಫರ್ನಿಚರ್ ವ್ಯಾಪಾರ ನಡೆಸುತ್ತಿದ್ದಾನೆ. ಈತ ಮದ್ಯ ಸೇವಿಸಿ ರಮಿತಳ ಅಂಗಡಿಗೆ ಬಂದು ಗಲಾಟೆ‌ ಮಾಡುತ್ತಿದ್ದು ಇದನ್ನು ರಮಿತ ಕಟ್ಟಡ ಮಾಲಕರಿಗೆ ಹೇಳಿದ್ದರು. ಈ ದ್ವೇಷದಿಂದ ರಾಮಾಮೃತಂ ಥಿನ್ನರ್ ರಮಿತಳ ಮೇಲೆ ಎರಚಿ‌ ಕಿಚ್ಚಿಕ್ಕಿದ್ದನು. ಗಂಭೀರ ಗಾಯಗೊಂಡ ರಮಿತಳನ್ನು‌ ಕಾಞಂಗಾಡ್ ಆಸ್ಪತ್ರೆಗೂ ಅನಂತರ ಮಂಗಳೂರು ಆಸ್ಪತ್ರೆಗೂ ದಾಖಲಿಸಲಾಗಿತ್ತು.

ರಮಿತಳ ಚಿಕಿತ್ಸೆಗೆ ಊರವರು‌ ನಿಧಿ ಸಂಗ್ರಹ ಆರಂಭಿಸಿದ್ದರು. ಅದಕ್ಕೂ‌ಮೊದಲೇ ರಮಿತ ಕೊನೆಯುಸಿರೆಳೆದರು.

Post a Comment

0 Comments