ಕಣ್ಣೂರು: ಸೌದೆ ಕಡಿಯುತ್ತಿದ್ದ ಅಜ್ಜಿಯ ಕೈಯಲ್ಲಿದ್ದ ಕತ್ತಿ ತಾಗಿ ಒಂದೂವರೆ ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕಣ್ಣೂರು ಆಲಕ್ಕೋಡು ಕೋಳಿಯಿಲ್ ನಿವಾಸಿ ವಿಷ್ಣು- ಪ್ರಿಯ ದಂಪತಿಯ ಪುತ್ರ ದಯಾಳ್ ಮೃತಪಟ್ಟ ಬಾಲಕ. ಈತನ ಮೃತದೇಹವನ್ನು ಪೆರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಯಿತು.
ಮಂಗಳವಾರ ಸಾಯಂಕಾಲ ಈ ಘಟನೆ ನಡೆದಿದೆ. ಅಜ್ಜಿ ನಾರಾಯಣಿ ಸೌದೆ ಕಡಿಯುತ್ತಿದ್ದರು. ನಾರಾಯಣಿಯ ಹಿಂಬಾಗದಲ್ಲಿದ್ದ ಮಗು ದಿಡೀರನೆ ಮುಂದಕ್ಕೆ ಬಂದಾಗ ಈ ಅವಘಡ ಉಂಟಾಗಿದೆ. ಗಂಭೀರ ಗಾಯಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ಉಳಿಸಲಾಗಲಿಲ್ಲ. ನಾರಾಯಣಿ ವಿರುದ್ದ ಪೊಲೀಸರು ಕೇಸು ದಾಖಲಿಸಿದರು
0 Comments