ಬದಿಯಡ್ಕ: ಕ್ಯಾನ್ಸರ್ ರೋಗ ಬಾಧಿತನಾಗಿ ಚಿಕಿತ್ಸೆ ಪಡೆಯುತ್ತಿದ್ದ ಮುಂಡಿತ್ತಡ್ಕ ಶಾಲೆಯ ಅಧ್ಯಾಪಕ ಪ್ರಶಾಂತ್ ರೈ (41) ನಿಧನರಾದರು. ಇಂದು (ಶನಿವಾರ) ಬೆಳಗ್ಗೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಇವರು ಬದಿಯಡ್ಕ ಪಿಲಾಂಕಟ್ಟೆ ನಿವಾಸಿಯಾಗಿದ್ದಾರೆ. ಅಧ್ಯಾಪಕರಾಗಿದ್ದ ವೇಳೆ ಅವರಿಗೆ ಕ್ಯಾನ್ಸರ್ ಬಾಧಿಸಿದ್ದು ಚಿಕಿತ್ಸೆ ನಡೆಸಲಾಗಿತ್ತು. ಈ ಮಧೈ ಇವರ ಚಿಕಿತ್ಸೆಗಾಗಿ ಸಮಿತಿ ರಚಿಸಿ ಹಣ ಸಂಗ್ರಹವೂ ಮಾಡಲಾಗಿತ್ತು. ಆಟೋ ರಿಕ್ಷಾ ಚಾಲಕರು, ಬಸ್ಸು ಸಿಬಂದಿಗಳು ಅವರಿಗಾಗಿ ಕಾರುಣ್ಯ ಯಾತ್ರೆ ನಡೆಸಿ ಹಣ ಸಂಗ್ರಹ ಮಾಡಿದ್ದರು. ಈ ಮಧ್ಯೆ ಅವರು ಕೊನೆಯುಸಿರೆಳೆದಿರುವುದು ಅಭಿಮಾನಿ ಬಳಗಕ್ಕೆ ಶಾಕ್ ಆಗಿದೆ. ಮೃತರು ತಂದೆ ರಾಮ ಮಾಸ್ತರ್, ತಾಯಿ ಸರಳ, ಪತ್ನಿ ದಿವ್ಯ, ಮಕ್ಕಳಾದ ಮನಸ್ವಿ
ಅನುಶ್ರೀ, ಸಹೋದರ ಗುರುಪ್ರಸಾದ್ ರೈ (ಶಿಕ್ಷಕರು,ಪಳ್ಳತ್ತಡ್ಕ ಶಾಲೆ) ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತದೇಹವನ್ನು ಇಂದು ಸಂಜೆ ಊರಿಗೆ ತರಲಾಗುವುದು.
0 Comments