ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 8 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಸುಹಾಸ್ ಶೆಟ್ಟಿ ಕೊಲೆಯ ಹಿಂದೆ ಬಾರಿ ಸಂಚು ನಡೆದಿರುವುದು ಸಹ ಬಯಲಾಗಿದೆ.
ಬಾಡಿಗೆ ಕೊಲೆಗಾರರನ್ನು ಬಳಸಿ ಈ ದಾಳಿ ನಡೆಸಿರುವ ಬಗ್ಗೆ ಪೊಲೀಸರಿಗೆ ಸಂಶಯ ಉಂಟಾಗಿದೆ. ವಿಡಿಯೋ ಸಾಕ್ಷ್ಯದ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದೀಗ 8 ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇಂದು ಪೊಲೀಸರು ಈ ಬಗ್ಗೆ ಮಾಹಿತಿ ಬಹಿರಂಗಪಡಿಸಲಿದ್ದಾರೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಆರೋಪಿಗಳ ತಂಡ ಅಡ್ಡಗಟ್ಟಿ ಮಂಗಳೂರಿನ ಬಜೆ ಸಮೀಪ ಹತ್ಯೆ ಮಾಡಿತ್ತು. ಮೇ.1 ರಂದು ಈ ಘಟನೆ ನೆಡೆದಿತ್ತು. ನಿನ್ನೆ ಸುಹಾಶ್ ಶೆಟ್ಟಿ ಅಂತ್ಯಸಂಸ್ಕಾರ ಕಾರಿಂಜದ ಸ್ವಗೃಹದಲ್ಲಿ ನಡೆದಿದೆ. ಈ ಘಟನೆಯಿಂದ ರಾಜ್ಯಾದ್ಯಂತ ಆಕ್ರೋಶಗಳು ಹೆಚ್ಚಾಗುತ್ತಿದೆ. ಇತ್ತ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, 8 ಆರೋಪಿಗಳ ವಿಚಾರಣೆ ತೀವ್ರಗೊಳಿಸಿದ್ದಾರೆ. ವಶಕ್ಕೆ ಪಡೆದಿರುವ ಕೆಲ ಆರೋಪಿಗಳು ದಕ್ಷಿಣ ಕನ್ನಡದಲ್ಲೇ ಅವಿತು ಕುಳಿತಿದ್ದರು. ಆರೋಪಿಗಳ ವಶಕ್ಕೆ ಪಡೆದಿರುವ ಕುರಿತು ಇಂದು ಮಂಗಳೂರು ಕಮಿಷನರ್ ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ.
0 Comments