ಪೆರ್ಲ: ಮಸೀದಿಯ ಕಂಪೌಂಡ್ ಒಳಗಿರುವ ಕಾಣಿಕೆ ಡಬ್ಬಿ ಕಳವುಗೈದ ಘಟನೆ ನಡೆದಿದೆ. ಪೆರ್ಲ ಮರ್ತ್ಯ ಜುಮಾ ಮಸೀದಿಯ ಕಾಣಿಕೆ ಡಬ್ಬಿ ಮುರಿದು ಅಂದಾಜು 10 ಸಾವಿರ ರೂ ಕಳವುಗೈಯ್ಯಲಾಗಿದೆ.
ಈ ಬಗ್ಗೆ ಮಸೀದಿ ಸಮಿತಿ ಕಾರ್ಯದರ್ಶಿ ಪೆರ್ಲ ಅಜಿಲಡ್ಕ ನಿವಾಸಿ ಶಾಹುಲ್ ಹಮೀದ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರು ಕೇಸು ದಾಖಲಿಸಿದ್ದಾರೆ.
ಕಾಣಿಕೆ ಡಬ್ಬಿ ಕಳವುಗೈಯ್ಯುವ ವಿಡಿಯೊ ಸಿಸಿ ಕ್ಯಾಮರಾದಲ್ಲಿ ಚಿತ್ರೀಕರಣಗೊಂಡಿದೆ. ಕಳವುಗೈದ ನಂತರ ಕಳ್ಳ ಬೈಕ್ ಹತ್ತಿ ಮರಳುತ್ತಿರುವುದು ವಿಡಿಯೋದಲ್ಲಿದೆ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯನಡ್ಕ, ಕುದ್ದುಪದವು ಎಂಬಲ್ಲಿಯೂ ಮಸೀದಿಯ ಕಾಣಿಕೆ ಡಬ್ಬಿ ಒಡೆದು ಹಣ ಕಳವುಗೈಯ್ಯಲಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ ಪೆರ್ಲ ಇಡಿಯಡ್ಕದಲ್ಲಿ ಮನೆಯ ಹಿಂಬಾಗದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು 8 ಪವನು ಚಿನ್ನಾಭರಣ, ನಗದು ಹಣ ದೋಚಿದ್ದರು. ಈ ಬಗ್ಗೆ ಪೋಲೀಸರು ಕೇಸು ದಾಖಲಿಸಿದ್ದು ಆದರೆ ತನಿಖೆ ಮುಂದುವರಿಯಲಿಲ್ಲ.
0 Comments