Ticker

6/recent/ticker-posts

ಉಪ್ಪಳದಲ್ಲಿ ಆಟೋರಿಕ್ಷಾ- ಕಾರು ಡಿಕ್ಕಿ ಹೊಡೆದು ಓರ್ವ ಮೃತ್ಯು


 ಉಪ್ಪಳ:  ರಾಷ್ಟ್ರೀಯ ಹೆದ್ದಾರಿ ಉಪ್ಪಳ ಗೇಟ್ ಬಳಿ ಆಟೋ ರಿಕ್ಷಾ ಹಾಗೂ ಕಾರು ಪರಸ್ಪರ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ‌ನಡೆದಿದೆ. ಆಟೋ ಚಾಲಕ ಕಾಞಂಗಾಡ್ ಬಳಿಯ ಮೋಹನನ್ ಮೃತಪಟ್ಟ ವ್ಯಕ್ತಿ. ನಿನ್ನೆ (ಬುದವಾರ) ಸಾಯಂಕಾಲ 5.30 ರ ವೇಳೆ ಈ ಘಟನೆ ನಡೆದಿದೆ. ಮೋಹನನ್ ಚಲಾಯಿಸಿದ ಆಟೊ ರಿಕ್ಷಾ ಹಾಗೂ ಡೆಸ್ಟರ್ ಕಾರು ಡಿಕ್ಕಿ ಹೊಡೆದಿದೆ. ಶಬ್ದ ಕೇಳಿ ಓಡಿ ಬಂದ ಸ್ಥಳೀಯರು  ನಜ್ಜುಗುಜ್ಜಾದ ಆಟೋ ರಿಕ್ಷಾದೊಳಗಿಂದ ಮೋಹನನ್ ರನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ

Post a Comment

0 Comments