Ticker

6/recent/ticker-posts

ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ದೃಢಕಲಶಾಭಿಷೇಕ ಸಂಪನ್ನ


ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮಂಗಳವಾರ ಬೆಳಗ್ಗೆ ಶುಭಮುಹೂರ್ತದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ದೃಢಕಲಶಾಭಿಷೇಕ ನಡೆಯಿತು. 


ಶ್ರೀ ಶಾಸ್ತಾರ ಸನ್ನಿಧಿ ಹಾಗೂ ಸಪರಿವಾರ ದೇವತಾ ಶಕ್ತಿಗಳಿಗೂ ಕಲಶಾಭಿಷೇಕ ನಡೆಯಿತು. ಪರಮಪೂಜ್ಯ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯ ಸಾನ್ನಿಧ್ಯವಹಿಸಿ ಸೇರಿದ ಭಗವದ್ಭಕ್ತರಿಗೆ ಮಂತ್ರಾಕ್ಷತೆಯನ್ನಿತ್ತು ಹರಿಸಿದರು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರಗಿತು. ರಾತ್ರಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಭಗವದ್ಭಕ್ತರು ಪಾಲ್ಗೊಂಡಿದ್ದರು. 


ಸೋಮವಾರ ರಾತ್ರಿ ಮಂಟಪ ಸಂಸ್ಕಾರ, ವಾಸ್ತುಬಲಿ, ವಾಸ್ತುರಾಕ್ಷೆಘ್ನ ಹೋಮ ಜರಗಿತು. ರಾತ್ರಿ ಶ್ರೀ ಬೆಂಕಿನಾಥೇಶ್ವರ ಯಕ್ಷಗಾನ ಮೇಳದವರಿಂದ ಸ್ವರ್ಣತುಲಾಭಾರ ಎಂಬ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Post a Comment

0 Comments