Ticker

6/recent/ticker-posts

ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಮತ್ತೋರ್ವ ಹಿಂದು ನಾಯಕನಿಗೆ ಕೊಲೆ ಬೆದರಿಕೆ, ಡೇಟ್ ಫಿಕ್ಸ್ ಮಾಡಿ ಪೋಸ್ಟ್ ಹಾಕಿದ ದುಷ್ಕರ್ಮಿಗಳು


  ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಹಿಂದೂ ಮುಖಂಡನ  ಹತ್ಯೆಗೆ ಸಂಚು ರೂಪಿಸಲಾಗಿದೆಯೆಂದು ತಿಳಿದು ಬಂದಿದೆ. ಭಜರಂಗದಳ ಮುಖಂಡ  ಭರತ್ ಕುಮ್ಡೇಲ್‌ ಹತ್ಯೆ ಮಾಡುವುದಾಗಿ  ಡೀಟ್ ಫಿಕ್ಸ್ ಮಾಡರುವ ಪೋಸ್ಟ್ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. 
"5/5/2025 ರಾತ್ರಿ 9:30ಕ್ಕೆ ನಿನ್ನ ಸ್ಥಳದಲ್ಲೇ ಕೊಲೆ' ಮಾಡುವುದಾಗಿ ಪೋಸ್ಟ್ ಹರಿಬಿಡಲಾಗಿದೆ. ಸುಹಾಸ್‌ ಶೆಟ್ಟಿ ಪೋಟೋಗೆ ರೈಟ್ ಚಿಹ್ನೆ ಹಾಕಿ  ವಿಕೃತಿ ಮೆರೆದಿದ್ದವರೇ ಈ‌ ಪೋಸ್ಟ್ ಹಾಕಿರುವ ಶಂಕೆಯಿದೆ.

ಎಸ್‌ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದಲ್ಲಿ  ಭರತ್ ಕುಮ್ಡೇಲು ಪ್ರಮುಖ ಆರೋಪಿಯಾಗಿದ್ದಾರೆ. 2017ರ ಜೂನ್ 21 ರಂದು  ಬಂಟ್ವಾಳದ ಬೆಂಜನಪದವು ಎಂಬಲ್ಲಿ ಎಸ್.ಡಿ.ಪಿ.ಐ. ನಾಯಕ ಅಶ್ರಫ್ ಬರ್ಬರವಾಗಿ ಹತ್ಯೆಗೀಡಾಗಿದ್ದ.  ಆತನ ಹತ್ಯೆ ಬಳಿಕ ಪ್ರತೀಕಾರವಾಗಿ ಬಂಟ್ವಾಳದ ಶರತ್‌ ಮಡಿವಾಳ ಹತ್ಯೆಯಾಗಿತ್ತು.

ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ‌ನಾಯಕ ಶರಣ್ ಪಂಪೈಲ್ ರಿಗೆ ಕೊಲೆ ಬೆದರಿಕೆ ಬಂದಿತ್ತು. ಇದೀಗ ಭರತ್‌ ಕುಮ್ಡೇಲ್‌ಗೆ ಜೀವ ಬೆದರಿಕೆ ಹಾಕಲಾಗಿದೆ. ಮುಂದಿನ ಟಾರ್ಗೆಟ್ ಶರಣ್ ಪಂಪೈಲ್ ಎಂದು ಈ ಹಿಂದೆಯೇ ಪೋಸ್ಟ್ ಹರಿಬಿಡಲಾಗಿದೆ. ಪೊಲೀಸ್‌ ಇಲಾಖೆಯ ಕ್ರಮದ ನಡುವೆ ದ್ವೇಷ ಕಾರುವ ಪೋಸ್ಟ್ ಹಾಕಲಾಗಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.

Post a Comment

0 Comments