ಮಂಜೇಶ್ವರ: ಮನೆ ಮಂದಿ ವಿದೇಶಕ್ಕೆ ಹೋಗಿದ್ದ ವೇಳೆ ಹಿಂಬಾಗಿಲು ಮುರಿದು 22 ಪವನು ಚಿನ್ನಾಭರಣ ಕಳವುಗೈದ ಘಟನೆ ನಡೆದಿದೆ. ಮಂಜೇಶ್ವರ ಬೀಚ್ ರಸ್ತೆಯಲ್ಲಿರುವ ನವೀನ್ ಮೊಂತೇರೋ ಅವರ ಮನೆಯಲ್ಲಿ ಕಳವು ನಡೆದಿದೆ.
ನವೀನ್ ಮೊಂತೇರೋ ಹಾಗೂ ಕುಟುಂಬ ಸದಸ್ಯರು ಎಪ್ರಿಲ್ 21 ರಂದು ವಿದೇಶಕ್ಕೆ ಹೋಗಿದ್ದರು. ನಿನ್ನೆ (ಶನಿವಾರ) ಸಾಯಂಕಾಲ ಅವರು ಮನೆಗೆ ಬಂದಾಗ ದರೋಡೆ ಪ್ರಕರಣ ತಿಳಿಯಿತು. ಮನೆಯ ಹಿಂಬಾಗಿಲು ಒಡೆದು ಒಳನುಗ್ಗಿ ಮಲಗುವ ಕೋಣೆಯ ಕಪಾಟು ಒಡೆದು ಚಿನ್ನಾಭರಣ ದರೋಡೆಗೈಯ್ಯಲಾಗಿತ್ತು. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಬೆರಳಚ್ಚು ತಜ್ಞರು ಆಗಮಿಸಲಿದ್ದಾರೆ. ಮನೆ ಪರಿಸರದ ಸಿಸಿ ಕ್ಯಾಮರಾಗಳನ್ನು ಪರಿಶೋಧಿಸಲಾಗುವುದು ಎಂದು ಪೋಲೀಸರು ತಿಳಸಿದ್ದಾರೆ
0 Comments