Ticker

6/recent/ticker-posts

ಕುಂಬಳೆಯಲ್ಲಿ ತರಕಾರಿ, ಹಣ್ಣು ಹಂಪಲು ವ್ಯಾಪಾರಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಕುಂಬಳೆ: ಕುಂಬಳೆ ಪೇಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತರಕಾರಿ-ಹಣ್ಣು ಹಂಪಲು ವ್ಯಾಪಾರಿಯ ಮೃತದೇಹ ಅಂಗಡಿ ಸಂಕೀರ್ಣದ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೆರುವಾಡು ನಿವಾಸಿ ಕೃಷ್ಣನ್- ಪ್ರೇಮಾವತಿ ದಂಪತಿಯ ಪುತ್ರ  ಸಂತೋಷ್ ಯಾನೆ ಸಂತು(40) ಮೃತಪಟ್ಟ ವ್ಯಾಪಾರಿ. ಇಂದು (ಮಂಗಳವಾರ) ಮದ್ಯಾಹ್ನ ಅರಿಮಲ  ಕಾಂಪ್ಲೆಕ್ಸ್ ಮೇಲೆ ಶೀಟ್ ಹಾಸಿದ ಮಾಡಿನ ಕಬ್ಬಿಣಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಈ ಕಟ್ಟಡದ ಕೆಳಗೆ ವ್ಯಾಪಾರ ಮಾಡುವವರ ಸಾಮಾಗ್ರಿಗಳನ್ನು ಇಲ್ಲಿ ಇಡಲಾಗುತ್ತದೆ. ಸಾಮಾನು ತೆಗೆಯಲು ತಲುಪಿದವರು ಸಂತುವಿನ‌ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ‌ಕಂಡಿದ್ದು ಇತರರಿಗೆ ಮಾಹಿತಿ ನೀಡಿದರು. ಕುಂಬಳೆ ಪೊಲೀಸರು ಆಗಮಿಸಿದ್ದು ಮಾಹಿತಿ ಸಂಗ್ರಹಿಸುತ್ತಿದ್ದಾರೆ

Post a Comment

0 Comments