ಪೆರ್ಲ: ದಾಖಲೆಗಳಿಲ್ಲದೆ ಬಸ್ಸಿನಲ್ಲಿ ಸಾಗಿಸುತ್ತಿದ್ದ 10 ಕಿಲೊ ಬೆಳ್ಳಿ ಸಹಿತ ಓರ್ವನನ್ನು ಅಬಕಾರಿ ಇಲಾಖೆಯ ಪ್ರತ್ಯೇಕ ಕೆ.ಮು.ತಂಡ ಬಂಧಿಸಿದೆ. ಕರ್ಣಾಟಕ ನಿವಾಸಿ ಸತೀಶ್(45) ಬಂಧಿತ ಆರೋಪಿ. ಪೆರ್ಲ ಅಬಕಾರಿ ಚೆಕ್ ಪೋಸ್ಟ್ ಬಳಿಯಿಂದ ನಿನ್ನೆ (ಶುಕ್ರವಾರ) ಸಾಯಂಕಾಲ 3.45 ರ ವೇಳೆ ಬಂಧನ ನಡೆದಿದೆ. ಪೆರ್ಲದಿಂದ ಬದಿಯಡ್ಕ ಭಾಗಕ್ಕೆ ಬರುತ್ತಿದ್ದ ಬಸ್ಸು ತಪಾಸಣೆ ಮಾಡಿದಾಗ ಬೆಳ್ಳಿ ಹಾಗೂ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಿವೆಂಟಿವ್ ಆಫೀಸರ್ ಅಬ್ದುಲ್ಲ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಂ.ವಿ.ಜಿಜಿನ್, ಸಾಬು.ಕೆ, ಸುಬಿನ್ ಫಿಲಿಫ್ ಮೊದಲಾದವರು ಭಾಗವಹಿಸಿದರು. ಆರೋಪಿ ಹಾಗೂ ಬೆಳ್ಳಿಯನ್ನು ಜಿ.ಎಸ್.ಟಿ.ವಿಭಾಗಕ್ಕೆ ಹಸ್ತಾಂತರಿಸಲಾಯಿತು
0 Comments