ಬದಿಯಡ್ಕ: ಇಲ್ಲಿನ ಪಾಡಲಡ್ಕ ಬಳಿಯ ನಿಡುಗಳ ಬಾಡಿಗೆ ಕ್ವಾರ್ಟರ್ಸಿನಲ್ಲಿ ಜೆ.ಸಿ.ಬಿ.ಚಾಲಕ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣದಲ್ಲಿ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕಿಳಿಂಗಾರು ನಿವಾಸಿ ಗಣೇಶ ಯಾನೆ ಮೊಟ್ಟ ಗಣೇಶ(36) ಬಂಧಿತ ಆರೋಪಿ. ಸುಳ್ಯ ಪೇರಾಜೆ, ನಿಧಿಮಲೆ ನಿವಾಸಿ, ಜೆ.ಸಿ.ಬಿ.ಚಾಲಕನಾಗಿದ್ದ ಕುಮಾರನ್ (26) ಆತ್ಮಹತ್ಯೆಗೈಯ್ಯಲು ನಿರಂತರ ಕಿರುಕುಳ ನೀಡಿ ಪ್ರೇರಣೆ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಣೇಶನನ್ನು ಬಂಧಿಸಲಾಗಿದೆಯೆಂದು ಬದಿಯಡ್ಕ ಪೊಲೀಸರು ತಿಳಿಸಿದ್ದಾರೆ.
ಜೆ.ಸಿ.ಬಿ.ಚಾಲಕ ಕುಮಾರನ್ ಮೃತದೇಹ ಸೋಮವಾರ ಸಂಜೆ ನಿಡುಗಳ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ನಾಲ್ಕು ತಿಂಗಳ ಹಿಂದೆ ಕಿಳಿಂಗಾರಿನಲ್ಲಿ ಮನೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರನ್ ಭಾಗವಹಿಸಿದ್ದರು. ಅಲ್ಲಿಗೆ ಬಂದ ಗಣೇಶ್, ಕುಮಾರನಿಗೆ ಹಲ್ಲೆಗೈದಿದ್ದನು. ಈ ಬಗ್ಗೆ ಬದಿಯಡ್ಕ ಪೊಲೀಸರು ಗಣೇಶ್ ವಿರುದ್ದ ಕೇಸು ದಾಖಲಿಸಿದ್ದರು.ಅನಂತರವೂ ಗಣೇಶ್ ನಿರಂತರವಾಗಿ ಕುಮಾರ್ ನಿಗೆ ಪೋನು ಮೂಲಕವೂ ನೇರವಾಗಿಯೂ ಬೆದರಿಕೆಯೊಡ್ಡುತ್ತಿದ್ದನೆನ್ನಲಾಗಿದೆ. ಎರಡು ದಿನಗಳ ಹಿಂದೆ ಕನ್ನೆಪ್ಪಾಡಿಯಲ್ಲಿ ಕುಮಾರನನ್ನು ತಡೆದು ನಿಲ್ಲಿಸಿ ಗಣೇಶ್ ಬೆದರಿಕೆಯೊಡ್ಡಿದ್ದನು ಎಂದೂ ಪೊಲೀಸರು ತಿಳಿಸಿದ್ದಾರೆ. ಇದರಂತೆ ಆತ್ಮಹತ್ಯೆಗೆ ಪ್ರೇರಣೆ ಕಾಯ್ದೆಯಂತೆ ಪೊಲೀಸರು ಗಣೇಶನನ್ನು ಬಂಧಿಸಿದ್ದು ಇಂದು ನ್ಯಾಯಾಲಯದಲ್ಲಿ ಹಾಜರಿಪಡಿಸುವರು.
0 Comments