Ticker

6/recent/ticker-posts

Ad Code

ಪೆರ್ಲದ ಐಶ್ವರ್ಯ ವ್ಯಾಪಾರ ಸಂಸ್ಥೆಯ‌ ಮಾಲಕ ವಿವೇಕಾನಂದ ನಾಪತ್ತೆ, ಪೊಲೀಸರಿಗೆ ದೂರು


 ಪೆರ್ಲ: ಇಲ್ಲಿನ ಕೆ.ಕೆ.ರೋಡಿನಲ್ಲಿರುವ ಐಶ್ವರ್ಯ ವ್ಯಾಪಾರ ಸಂಸ್ಥೆಯ ಮಾಲಕ ವಿವೇಕಾನಂದ (41) ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಈ ತಿಂಗಳ 13 ರಂದು ಬೆಳಗ್ಗೆ 6 ಗಂಟೆಗೆ ಅಂಗಡಿ ತೆರೆಯಲೆಂದು ಮನೆಯಿಂದ ಹೊರಟವರು ಅನಂತರ ಮನೆಗೆ ಹಿಂತಿರುಗಿಲ್ಲ ಎಂದು ಪತ್ನಿ ಸುನಿತ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸಾದಾರಣವಾಗಿ ಬೆಳಗ್ಗೆ ಅಂಗಡಿ ತೆರೆಯಲು ಹೋದರೆ 10 ಗಂಟೆಗೆ ಚಾ ಕುಡಿಯಲೆಂದು ಮನೆಗೆ ಬರುವುದಿದೆ. ಆದರೆ ಅಂದು  ಅಂಗಡಿ ತೆರೆಯಲೆಂದು ಹೋದವರು ಹಿಂತಿರುಗಿಲ್ಲ ಎಂದು ದೂರಲಾಗಿದೆ. ವಿವೇಕಾನಂದರ ಒಂದು ಮೊಬೈಲು ಮನೆಯಲ್ಲಿಯೂ ಇನ್ನೊಂದು ಮೊಬೈಲು ಅಂಗಡಿಯಲ್ಲಿಯೂ ಇದೆ.  ಇವರ ಸಂಬಂಧಿಕರು ಗೋವಾದಲ್ಲಿದ್ದಾರೆ. ತಾನು ಗೋವಾ ಹೋಗುತ್ತಿದ್ದೇನೆ ಎಂದು ವಿವೇಕಾನಂದ ಪತ್ನಿಗೆ‌ ಫೋನಾಯಿಸಿದ್ದರು. ಆದರೆ ಗೋವಾ ತಲುಪಿಲ್ಲ ಎಂದೂ ತಿಳಿದು ಬಂದಿದೆ. 

Post a Comment

0 Comments