Ticker

6/recent/ticker-posts

Ad Code

ಅಂಗಳ‌ ಗುಡಿಸುತ್ತಿದ್ದ ಬಾಲಕಿಯನ್ನು ಕಾರಿನಲ್ಲಿ‌ ಹತ್ತಿಸಿ ಕೊಂಡೊಯ್ದ ಪ್ರಕರಣ, ಬದಿಯಡ್ಕ ಬಳಿಯ ಪೆರಡಾಲ ನಿವಾಸಿ ವಿರುದ್ದ ಪೋಕ್ಸೊ ಕೇಸು ದಾಖಲು


 ಕಾಸರಗೋಡು: ಅಂಗಳ ಗುಡಿಸುತ್ತಿದ್ದ ಬಾಲಕಿಯನ್ನು ಕಾರಿನಲ್ಲಿ ಅಪಹರಿಸಿದ ಪ್ರಕರಣದಲ್ಲಿ ಬದಿಯಡ್ಕ ನಿವಾಸಿಯ ವಿರುದ್ದ ಕಾಸರಗೋಡು ವನಿತಾ  ಪೊಲೀಸರು ಪೋಕ್ಸೊ ಕೇಸು ದಾಖಲಿಸಿದ್ದಾರೆ. ಬದಿಯಡ್ಕ ಪೆರಡಾಲ ನಿವಾಸಿ ಉಮರುಲ್ ಸಾಬಿತ್ (27) ವಿರುದ್ದ ಕೇಸು ದಾಖಲಿಸಲಾಗಿದೆ.

  ಸ್ನಾಪ್ ಚಾಟ್ ಮೂಲಕ ಉಮರುಲ್ ಸಾಬಿತ್, ಬಾಲಕಿಯ ಜತೆ ಗೆಳೆತನ ಬೆಳೆಸಿದ್ದನೆನ್ನಲಾಗಿದೆ. ಸೋಮವಾರ ಬೆಳಗ್ಗೆ 7.30 ಕ್ಕೆ ಸಾಬಿತ್ ಬಾಲಕಿಯ ಮನೆಗೆ ಕಾರಿನಲ್ಲಿ ಬಂದಿದ್ದು ಅಂಗಳ ಗುಡಿಸುತ್ತಿದ್ದ ಬಾಲಕಿಯನ್ನು ಕಾರಿನಲ್ಲಿ ಹತ್ತಿಸಿ ಕೊಂಡೊಯ್ದನೆನ್ನಲಾಗಿದೆ. ಬಾಲಕಿಯೊಂದಿಗೆ ಮಂಗಳೂರಿಗೆ ತಲುಪಿದ ಉಮರುಲ್ ಸಾಬಿತ್ ವಸತಿಗೃಹವೊಂದರ ಮುಂದೆ ಕಾರು ನಿಲ್ಲಿಸಿ ಬಾಡಿಗೆ ಕೋಣೆ ಪಡೆಯಲು ಹೋದನೆನ್ನಲಾಗಿದೆ. ಕೂಡಲೇ ಬಾಲಕಿ ತನ್ನ ತಾಯಿಗೆ ಮಾಹಿತಿ ನೀಡಿದಳು. ಅನಂತರ ಬಾಲಕಿ‌ ಪ್ರತಿಭಟಿಸಿದಾಗ ಉಮರುಲ್ ಸಾಬಿತ್ ಬಾಲಕಿಯನ್ನು ಮನೆಯ ಎದುರು ಬಿಟ್ಟು‌ ಪರಾರಿಯಾದನು. ಕೂಡಲೇ ಬಾಲಕಿಯ ಹೆತ್ತವರು ವನಿತಾ ಸೆಲ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕೇಸು ದಾಖಲಿಸಲಾಗಿದೆ

Post a Comment

0 Comments