Ticker

6/recent/ticker-posts

Ad Code

ಅಂಗನವಾಡಿಯಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ‌ ಮಗಳನ್ನು ಕರೆದುಕೊಂಡು ಹೋಗಿ ಹೊಳೆಗೆಸೆದು ಕೊಂದ ತಾಯಿ


 ಅಂಗನವಾಡಿಯಲ್ಲಿದ್ದ ನಾಲ್ಕು ವರ್ಷದ ಮಗಳನ್ನು ಕರೆದುಕೊಂಡು ಹೋಗಿ ಹೆತ್ತ ತಾಯಿಯೇ ಹೊಳೆಗೆಸೆದು ಕೊಲೆಗೈದ ಘಟನೆ ನಡೆದಿದೆ. ಆಲುವ ಮರಕುಯಿ ನಿವಾಸಿ ಕಲ್ಯಾಣಿ(4) ಮೃತಪಟ್ಟವಳಾಗಿದ್ದು ಈಕೆಯ ತಾಯಿ ಸಂಧ್ಯ ಇದೀಗ ಪೊಲೀಸರ ಕಸ್ಟಡಿಯಲ್ಲಿದ್ದಾಳೆ. ಈಕೆ ಮಾನಸಿಕ ಅಸ್ವಸ್ಥೆ ಎಂದೂ ಹೇಳಲಾಗುತ್ತಿದೆ. ನಿನ್ನೆ  (ಸೋಮವಾರ) ಸಾಯಂಕಾಲ ಈ ಘಟನೆ ನಡೆದಿದೆ. 
       ‌‌‌ ನಿನ್ನೆ ಸಂಜೆ 3 ಗಂಟೆಗೆ ಮಗಳನ್ನು ಕರೆದುಕೊಂಡು ಬರಲು ತಾಯಿ ಸಂಧ್ಯ ಅಂಗನವಾಡಿಗೆ ಹೋಗಿದ್ದಳು. ಸಾಯಂಕಾಲ 7.30 ಕ್ಕೆ  ಸಂಧ್ಯ ‌ಮನೆಗೆ ಬಂದಾಗ ಜತೆಗೆ ಮಗಳು ಇರಲಿಲ್ಲ. ಈ ಬಗ್ಗೆ ಮನೆಯವರು ಪ್ರಶ್ನಿಸಿದಾಗ ತಾನು ಮಗಳನ್ನು ಹೊಳೆಗೆಸೆದಿರುವುದಾಗಿ ಹೇಳಿದಳು. ಮನೆಯವರು ಈ ಮಾಹಿತಿಯನ್ನು ಪೊಲೀಸರಿಗೆ ನೀಡಿದರು.    ಮಾಹಿತಿ ತಿಳಿದು ಪೊಲೀಸರು, ಅಗ್ನಿಶಾಮಕ ದಳ, ಸ್ಕೂಬಾ ಡೈವಿಂಗ್, ಊರವರು ಸೇರಿ ವ್ಯಾಪಕ ಹುಡುಕಾಟ ನಡೆಸಿದ್ದರು‌. ಅರ್ದ ರಾತ್ರಿಯ ವೇಳೆ ಮಗುವಿನ ಮೃತದೇಹ ಪತ್ತೆಯಾಗಿದೆ. ಸಂಧ್ಯಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು ಆಕೆಯ ವಿರುದ್ದ ಕೊಲೆ ಪ್ರಕರಣ ದಾಖಲಿಸಿದ್ದಾರೆ.

  ಸಂಧ್ಯ ಹಾಗೂ ಆಕೆಯ ಗಂಡನ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಸಂಧ್ಯ ತವರು ಮನೆಯಲ್ಲಿ ವಾಸಿಸುತ್ತಿದ್ದಾಳೆ. ಈ ಹಿಂದೆಯೂ ಕಲ್ಯಾಣಿಯನ್ನು ಹತ್ಯೆಗೈಯ್ಯಲು ಸಂಧ್ಯ ಯತ್ನಿಸಿದ್ದಳು

Post a Comment

0 Comments