Ticker

6/recent/ticker-posts

Ad Code

ವಿದೇಶಕ್ಕೆ ಉದ್ಯೋಗಕ್ಕೆಂದು ಮನೆಯವರು ವಿಮಾನ ನಿಲ್ದಾಣದವವರೆಗೆ ಕರೆತಂದು ಬೀಳ್ಕೊಟ್ಟ ಯುವಕ ನಾಪತ್ತೆ


 ಮುಳಿಯಾರು: ದುಬೈಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟ ಯುವಕ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಮುಳಿಯಾರು ಮಲ್ಲಂ ಚೆನಂಗೋಡು ನಾರಾಯಣೀಯಂ ನಿವಾಸಿ ರಾಘೇಶ್(35) ನಾಪತ್ತೆಯಾದ ವ್ಯಕ್ತಿ. ಮೇ. 15 ರಂದು ಸಾಯಂಕಾಲ 4 ಗಂಟೆಗೆ ಗಲ್ಫ್ ರಾಷ್ಟ್ರಕ್ಕೆ ಉದ್ಯೋಗಕ್ಕೆ ಹೋಗುವುದಾಗಿ ಹೇಳಿ ಮನೆಯವರು ರಾಘೇಶ್ ನನ್ನು ಮಂಗಳೂರು ವಿಮಾನ‌ನಿಲ್ದಾಣದಲ್ಲಿ ಬೀಳ್ಕೊಟ್ಟಿದ್ದರು. ಆದರೆ ರಾಘೇಶ್ ಗಲ್ಫ್ ಗಾಗಲೀ ವಾಪಾಸು ಮನೆಗಾಗಲೀ ತಲುಪಿರಲಿಲ್ಲ. ಈ ಹಿನ್ನೆಲೆಯಲ್ಲಿ ತಾಯಿ ವತ್ಸಲ ಆದೂರು ಪೊಲೀಸರಿಗೆ ದೂರು ನೀಡಿದ್ದರು. ರಾಘೇಶ್ ಈ ಹಿಂದೆ ವಿಟ್ಲದಲ್ಲಿರುವ ಕೆಂಪು ಕಲ್ಲು ಕೋರೆಯಲ್ಲಿ ಕಾರ್ಮಿಕರಾಗಿದ್ದರು. ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ

Post a Comment

0 Comments