Ticker

6/recent/ticker-posts

Ad Code

ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ರೋಗಿಗಳ ಸಂಖೈ, ಮೇ ತಿಂಗಳಲ್ಲಿ 273 ಮಂದಿಗೆ ಸೋಂಕು


 ತಿರುವನಂತಪುರಂ:   ಅಲ್ಪ ಕಾಲದ ಬಿಡುವಿನ ನಂತರ ಕೇರಳದಲ್ಲಿ ಇದೀಗ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಮೇ ತಿಂಗಳಲ್ಲಿ ರಾಜ್ಯದಲ್ಲಿ 273 ಮಂದಿಗೆ ಕೋವಿಡ್ ರೋಗ ದೃಡೀಕರಣಗೊಂಡಿದೆ.  ರಾಜ್ಯ ಆರೋಗ್ಯ ಇಲಾಖೆಯು ಪ್ರಕಟಿಸಿದ ವರದಿಯಲ್ಲಿ ಈ ಅಂಕಿ ಅಂಶಗಳನ್ನು ಉಲ್ಲೇಖಿಸಲಾಗಿದೆ. ಮೇ ತಿಂಗಳಲ್ಲಿ ಕೊಟ್ಟಯಂ 82, ತಿರುವನಂತಪುರಂ 73, ಎರ್ನಾಕುಲಂ 49, ಪತ್ತನಂತಿಟ್ಟ 30, ತ್ರಿಶೂರ್ 26 ಎಂಬೀ ರೀತಿಯಲ್ಲಿ ರೋಗ ಪೀಡಿತರ ಸಂಖೃ ವರದಿಯಾಗಿದೆ. ಮೇ.2 ನೇ ವಾರದಲ್ಲಿ ರಾಜ್ಯದಲ್ಲಿ 69 ಮಂದಿಗೆ ರೋಗ ದೃಢೀಕರಣಗೊಂಡಿದೆ.  ಕೋವಿಡ್ ರೋಗ ಪೀಡಿತರ ಸಂಖೈ ಹೆಚ್ಚಳಗೊಳ್ಳುತ್ತಿರುವ ಬಗ್ಗೆ ಆತಂಕ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ

Post a Comment

0 Comments