Ticker

6/recent/ticker-posts

Ad Code

ಪತ್ನಿಯ ಸೀಮಂತ ದಿನದಂದೇ ಪತಿ‌ ಕುಸಿದು ಬಿದ್ದು ಮೃತ್ಯು


ವಿಟ್ಲ:  ಪತ್ನಿಯ ಸೀಮಂತದ ಶುಭ ದಿನದಂದೇ ಪತಿ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ವಿಟ್ಲ ಕನ್ಯಾನ ಬಳಿಯ ಮಿತ್ತನಡ್ಕ ನಿವಾಸಿ ಸತೀಶ್(33) ಮೃತಪಟ್ಟ ದುರ್ದೈವಿ. ಇವರು ಪಿಕಪ್ ಚಾಲಕರಾಗಿದ್ದಾರೆ. ಮನೆಯಲ್ಲಿ ಪತ್ನಿಯ ಸೀಮಂತ ಕಾರ್ಯಕ್ರಮ ನಡೆಯುತ್ತಿದ್ದಾಗ ಇವರು ಹಠಾತ್ತನೆ ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಇವರನ್ನು ಸ್ಥಳೀಯ ಆಸ್ಪತ್ರೆಗೂ ಅನಂತರ ಮಂಗಳೂರು ಆಸ್ಪತ್ರೆಗೂ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಾಕಾರಿಯಾಗದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇದರಿಂದಾಗಿ ಸೀಮಂತದ ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕ ಸಾಗರ ಸೃಷ್ಟಿಯಾಗಿದೆ.

Post a Comment

0 Comments