Ticker

6/recent/ticker-posts

Ad Code

ಬಟ್ಟೆ ತೊಳೆಯಲೆಂದು ತೋಡಿಗೆ‌ ಇಳಿದ‌ ಮಹಿಳೆ ನೀರಿನಲ್ಲಿ‌ ಮುಳುಗಿ‌ ಮೃತ್ಯು‌


   ಬದಿಯಡ್ಕ:  ಬಟ್ಟೆ ತೊಳೆಯಲೆಂದು ತೋಡಿಗೆ ಹೋದ ಮಹಿಳೆ ನೀರಿನಲ್ಲಿ ಮುಳುಗಿ‌ ಮೃತಪಟ್ಟ ಘಟನೆ ನಡೆದಿದೆ. ಮಲ್ಲ ದುರ್ಗಾಪರಮೇಶ್ವರಿ ಕ್ಷೇತ್ರದ ಬಳಿಯ ದಿವಂಗತ ನಾರಾಯಣ ‌ಮಣಿಯಾಣಿಯವರ  ಪತ್ನಿ ಗೋಪಿಕ(80) ಮೃತಪಟ್ಟ ಮಹಿಳೆ. ಇಂದು (ಗುರುವಾರ) ಬೆಳಗ್ಗೆ 10 ಗಂಟೆಯ ವೇಳೆ ಮನೆಯ ಬಳಿಯಿರುವ ತೋಡಿನಲ್ಲಿ  ಬಟ್ಟೆ ತೊಳೆಯಲೆಂದು ಹೋಗಿದ್ದರು. ಬಹಳ ಹೊತ್ತಾದರೂ ಹಿಂತಿರುಗದ ಕಾರಣ ಹುಡುಕಿದಾಗ ಮದ್ಯಾಹ್ನದ ವೇಳೆ ನಾಲ್ಕು‌ ಕಿ.ಮೀಟರ್ ದೂರದಲ್ಲಿ‌ಮೃತದೇಹ ಕಂಡು ಬಂದಿದೆ. ಮೃತದೇಹವನ್ನು ‌ಜನರಲ್ ಆಸ್ಪತ್ರೆಯಲ್ಲಿ ‌ಇರಿಸಲಾಗಿದೆ.

Post a Comment

0 Comments