Ticker

6/recent/ticker-posts

ಕಾರಿನಲ್ಲಿ ಎಂಡಿಎಂಎ ಮಾದಕವಸ್ತು ಸಾಗಿಸುತ್ತಿದ್ದ ಇಬ್ಬರು ಯುವತಿಯರ ಸಹಿತ ನಾಲ್ವರ ಸೆರೆ


 ಕಾರಿನಲ್ಲಿ ಸಾಗಿಸುತ್ತಿದ್ದ 27 ಗ್ರಾಂ ಎಂಡಿಎಂಎ ಸಹಿತ ನಾಲ್ಕು ಮಂದಿಯನ್ನು ಕೋಜಿಕ್ಕೋಡ್  ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ನಿವಾಸಿಗಳಾದ ಅಮರ್(32), ವೈಷ್ಣವಿ (27), ಕುಟ್ಯಾಡಿ ನಿವಾಸಿ ವಾಹೀದ್(38),  ತಲಶೇರಿ ನಿವಾಸಿ ಆದಿರಾ(30) ಬಂಧಿತ ಆರೋಪಿಗಳು. ಇವರು ಕಣ್ಣೂರಿನಿಂದ ವಿವಿದ ಕಡೆಗಳಿಗೆ ಕಾರಿನಲ್ಲಿ ಎಂಡಿಎಂಎ ಪೂರೈಸುವ ಏಜಂಟರುಗಳಾಗಿದ್ದಾರೆ. ಬಂಧಿತ ಅಮರ್ ಈ ಹಿಂದೆ ಇಲೆಕ್ಟ್ರಾನಿಕ್ ಸಂಸ್ಥೆಯ ಮೆನೇಜರ್ ಆಗಿದ್ದು ಅನಂತರ ಉದ್ಯೋಗ ತೊರೆದು ಪೂರ್ಣಾವಧಿ ಮಾದಕವಸ್ತು ಮಾರಾಟದಲ್ಲಿ ತಿಡಗಿಸಿಕೊಂಡಿದ್ದಾನೆ. ಬಂಧಿತ ಆದಿರಾ ಕಣ್ಣೂರು, ಕೋಜಿಕ್ಕೋಡ್ ಜಿಲ್ಲೆಗಳಲ್ಲಿ ಈವಂಟ್ ಮೆನೇಜಮೆಂಟ್ ನಡೆಸುತ್ತಿದ್ದಾಳೆ. ವೈಷ್ಣವಿ ಕಣ್ಣೂರಿನ ಕೋಸ್ಮೆಟಿಕ್ ಸಂಸ್ಥೆಯ ನೌಕರೆ.ವಾಹಿದ್ ಕೋಳಿ ವ್ಯಾಪಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ

Post a Comment

0 Comments