Ticker

6/recent/ticker-posts

ಕೇರಳದ ನಿಲಂಬೂರು ಉಪಚುನಾವಣೆ 70.76 ಶೇಖಡಾ ಮತದಾನ


ಶಾಸಕ ಪಿ.ವಿ.ಅನ್ವರ್  ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಇಂದು ನಡೆದ ಚುನಾಣೆಯಲ್ಲಿ ಮಧ್ಯಾಹ್ನದ ವರೆಗೆ ಬಿರುಸಿನ ಮತದಾನ ಕಂಡು ಬಂದಿದೆ. 

ಐಕ್ಯ ಪ್ರಜಾಪ್ರಭುತ್ವ ರಂಗದ ಸಿಟ್ಟಿಂಗ್ ಸೀಟ್ ಆಗಿದ್ದ ನಿಲಂಬೂರಿನಲ್ಲಿ ಕಳೆದ ಎರಡು ಅವಧಿಯಲ್ಲಿ ಎಡರಂಗ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪಿ.ವಿ.ಅನ್ವರ್ ಗೆಲುವು ಸಾಧಿಸಿದ್ದರು. ಇದೇ ಪಿ.ವಿ.ಅನ್ವರ್ ಎಡರಂಗದ ಜತೆ ಮುನಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಇದೀಗ ಉಪಚುನಾವಣೆ ನಡೆಯುತ್ತಿದೆ.

 ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪಿ.ವಿ.ಅನ್ವರ್ ಸ್ಪರ್ದಿಸುತ್ತಿದ್ದಾರೆ. ಎಡರಂಗದಿಂದ ಎಂ.ಸ್ವರಾಜ್, ಐಕ್ಯ ರಂಗದಿಂದ ಆರ್ಯಾಡನ್ ಶೌಖತ್, ಬಿಜೆಲಿಯಿಂದ.ಅಡ್ವ. ಮೊಹನ್ ಜಾರ್ಜ್ ಸ್ಪರ್ದಿಸುತ್ತಿದ್ದಾರೆ‌. ಪಕ್ಷೇತರರ ಸಹಿತ ಒಟ್ಟು 10 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ

Post a Comment

0 Comments