Ticker

6/recent/ticker-posts

Ad Code

ಮುಂಡಿತ್ತಡ್ಕ ಪಳ್ಳಂ ಎಣ್ಣೆ ಮಿಲ್ಲಿನಲ್ಲಿ ದಾಸ್ತಾನಿರಿಸಿದ್ದ ಗೆರಟೆಗಳನ್ನು ಕಳವುಗೈದ ಕಳ್ಳರು


ಮುಂಡಿತ್ತಡ್ಕ : ಇಲ್ಲಿನ ಪಳ್ಳಂ ಪ್ಲೋರ್ ಎಂಡ್ ಆಯಿಲ್ ಮಿಲ್ ನಲ್ಲಿ ಗೋಣಿ ಚೀಲದಲ್ಲಾಗಿ ಸಂಗ್ರಹಿಸಿಡಲಾಗಿದ್ದ  ಗೆರೆಟೆ ಕಳವುಗೈದಿರುವುದಾಗಿ ದೂರಲಾಗಿದೆ.‌

ಪಚ್ಚಂಬಳ ನಿವಾಸಿಯಾದ ಝಕರಿಯಾ ಪಿ.ಎಂ. ಎಂಬವರ ಮಾಲಕತ್ವದಲ್ಲಿರುವ ಪಳ್ಳ ಮಿಲ್ ನಿಂದ  ಜೂನ್ 15ರಂದು ರಾತ್ರಿ

30 ಗೋಣಿ ಗೆರಟೆ ಕಳವು ಹೋಗಿರುವುದಾಗಿ ಬದಿಯಡ್ಕ ಪೋಲಿಸರಿಗೆ ದೂರು ನೀಡಲಾಗಿದೆ‌.  ಪೋಲಿಸರು ಈ ಪರಿಸರದಲ್ಲಿರುವ ಸಿಸಿಟಿವಿಗಳನ್ನು ಕೇಂದ್ರಿಕರಿಸಿ ನಡೆಸಿದ ತನಿಖೆಯಲ್ಲಿ ಇದೇ ಸಮಯ ಪಿಕ್ ಆಪ್ ವಾಹನವೊಂದು ಕನ್ಯಪ್ಪಾಡಿ ಭಾಗದಿಂದ ಬಂದು ಒಂದು ತಾಸಿನ‌ ಬಳಿಕ ಮರಳಿರುವುದು ಕಂಡು ಬರುತ್ತಿದೆ. 

ಸುಮಾರು 15 ಸಾವಿರ ರೂ ನಷ್ಟವಾಗಿರುವುದಾಗಿ ಮಿಲ್ ಮಾಲೀಕರು ತಿಳಿಸಿದ್ದಾರೆ.

Post a Comment

0 Comments