Ticker

6/recent/ticker-posts

ಪೆರ್ಲ ಸ.ನಾ‌.ಎಎಲ್ ಪಿ ಶಾಲಾ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ



 ಪೆರ್ಲ : ಪೆರ್ಲ ಎಸ್ ಎನ್ ಎ ಎಲ್ ಪಿ ಶಾಲಾ ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ರಾಜೇಶ್ ಬಜಕೂಡ್ಲು, ಮಾತೃ ಸಂಘದ ಅಧ್ಯಕ್ಷೆಯಾಗಿ ಬಿಂದು ಬಣ್ಪುತ್ತಡ್ಕ  ಆಯ್ಕೆಯಾಗಿದ್ದಾರೆ.   2024-25 ರ ಪಿಟಿಎ ಉಪಾಧ್ಯಕ್ಷರಾದ ರವಿ ಸೂರ್ಡೇಲು ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ   ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಸಂಧ್ಯಾರವರು ವರದಿ ಮಂಡಿಸಿದರು. ಮುಖ್ಯ ಅತಿಥಿಯಾಗಿ ಬದಿಯಡ್ಕ ಪೊಲೀಸ್ ಠಾಣೆಯ ಎ ಎಸ್ ಐ ಸುಕುಮಾರನ್ ರವರು ಮಾದಕ ವಸ್ತು ಹಾಗೂ ಮಕ್ಕಳ ಮನೋವೈಜ್ಞಾನಿಕತೆಯ ಬಗ್ಗೆ ತರಗತಿ ನಡೆಸಿದರು. 2025-26ರ ನೂತನ ಪಿಟಿಎ ರೂಪೀಕರಣ ಮತದಾನದ ಮೂಲಕ ಆಯ್ಕೆಗೊಂಡಿತ್ತು. ರಾಜೇಶ್ ಬಜಕೂಡ್ಲುರವರು ಅತ್ಯಧಿಕ ಬಹುಮತದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ರವಿ ಸೂರ್ಡೇಲುರವರು ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಎಂಪಿಟಿಎ ಅಧ್ಯಕ್ಷೆಯಾಗಿ ಬಿಂದು ಬಣ್ಪುತ್ತಡ್ಕ, ಮಧ್ಯಾಹ್ನದೂಟ ಸಮಿತಿ ಅಧ್ಯಕ್ಷರಾಗಿ ಸದಾನಂದ ಸೂರ್ಡೇಲು, ಶಾಲಾ ಸ್ಪೋಟ್ಸ್ ಕೌನ್ಸಿಲ್ ಅಧ್ಯಕ್ಷರಾಗಿ ಅರುಣ್ ಕುಮಾರ್ ಖಂಡಿಗೆ ಹಾಗೂ ಪ್ರೊಗ್ರಾಂ ಸಮಿತಿ ಅಧ್ಯಕ್ಷರಾಗಿ ನಾರಾಯಣ ನಾಯಕ್ ನಲ್ಕ ಆಯ್ಕೆಗೊಂಡರು. ಕಾರ್ಯಕಾರೀ ಸಮಿತಿ ಸದಸ್ಯರುಗಳಾದ ಗೋವಿಂದ ನಾಯ್ಕ ಬೇಂಗಪದವು, ಸಾವಿತ್ರಿ ಅಡ್ಕ, ನವೀನ್ ನಾಯಕ್ ಉಕ್ಕಿನಡ್ಕ, ವಿಜಯಶ್ರೀ ಬಣ್ಮುತ್ತಡ್ಕ, ಜಯಲಕ್ಷ್ಮಿ ಅಬ್ಬಿಕಟ್ಟೆ, ವಿಜಯಲಕ್ಷ್ಮೀ ಎಸ್ ಗೋಳಿತ್ತಡ್ಕ ಹಾಗೂ ಶಾಲಾ ನಾಯಕಿ ಸಮನ್ವಿ ಬಜಕೂಡ್ಲು ಉಪಸ್ಥಿತರಿದ್ದರು.ಡಯಟ್ ಮಾಯಿಪ್ಪಾಡಿ ಶಿಕ್ಷಕಿ ವಿದ್ಯಾರ್ಥಿಗಳಾದ ರಕ್ಷಿತಾ,ಮಮತ ಪ್ರಾರ್ಥನೆ ಹಾಡಿದರು.

ಶಿಕ್ಷಕಿ ಉಮಾಶಂಕರಿ ಸ್ವಾಗತಿಸಿ ಶಿಕ್ಷಕ  ಶ್ಯಾಮ್ ರಂಜಿತ್ ವಂದಿಸಿದರು. ಶಿಕ್ಷಕ ಉದಯ ಸಾರಂಗ ಕಾರ್ಯಕ್ರಮ ನಿರೂಪಿಸಿದರು. 

Post a Comment

0 Comments