Ticker

6/recent/ticker-posts

ಕರ್ತವ್ಯದ ಜತೆ ಮಾದಕವಸ್ತು ಸಾಗಾಟ; ಎಂಡಿಎಂಎ, ಹ್ಯಾಶಿಶ್ ಎಣ್ಣೆ ಸಹಿತ ರೈಲ್ವೇ ಟಿ.ಟಿ.ಇ.ಸೆರೆ


 2.6 ಗ್ರಾಂ ಎಂಡಿಎಂಎ ಹಾಗೂ 3.76 ಗ್ರಾಂ ಹ್ಯಾಶಿಶ್ ಎಣ್ಣೆ ಸಹಿತ ರೈಲ್ವೇ ಟಿ.ಟಿ.ಇ.ಯನ್ನು ಕೊಚ್ಚಿ ಸಿಟಿ ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿ ಎಳಮಕ್ಕರ  ನಿವಾಸಿ ಅಖಿಲ್ ಜೋಸೆಫ್(35) ಬಂಧಿತ ಆರೋಪಿ. ನಿನ್ನೆ (ಬುದವಾರ) ಬೋಳ್ಗಾಟ್ಟಿ ಬಳಿಯಿಂದ ಈತನ ಬಂಧನ ನಡೆದಿದೆ. ಬಂಧಿತ ಅಖಿಲ್ ದಕ್ಷಿಣ ರೈಲ್ವೇ ಎರ್ನಾಕುಲಂ ವಲಯದ ಟಿ.ಟಿ.ಇ.ಆಗಿದ್ದಾನೆ. ಈತ ಕರ್ತವ್ಯದ ವೇಳೆ ವಿವಿದೆಡೆ ಮಾದಕವಸ್ತು ಸಾಗಿಸುತ್ತಿದ್ದಾನೆಂಬ ರಹಸ್ಯ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಪೊಲೀಸರು ಈತನ ಮೇಲೆ ನಿಗಾ ಇಟ್ಟಿದ್ದರು. ಕೊಚ್ಚಿ ಸಿಟಿ ಪೋಲೀಸ್ ಆಯುಕ್ತರ ಆದೇಶದಂತೆ ನಾರ್ಕೊಟಿಕ್ ಸೆಲ್ ಎಸ್.ಪಿ.ಅಬ್ದುಲ್ ಸಲಾಂ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ

Post a Comment

0 Comments