Ticker

6/recent/ticker-posts

ಮನೆಯಂಗಳದಲ್ಲಿ ಮಗುವಿಗೆ ಅನ್ನ ಕೊಡುತ್ತಿದ್ದ ವೇಳೆ ತೆಂಗಿನ ಮರ ಬುಡ ಸಹಿತ ಉರುಳಿ ಬಿದ್ದು ಯುವತಿ ಮೃತ್ಯು


 ಮನೆಯಂಗಳದಲ್ಲಿ ಮಗುವಿಗೆ ಅನ್ನ ಕೊಡುತ್ತಿದ್ದ ವೇಳೆ ತೆಂಗಿನ ಮರ ಬುಡ ಸಹಿತ ಉರುಳಿ ಬಿದ್ದು ಮಹಿಳೆ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕೋಜಿಕ್ಕೋಡ್ ವಾಣಿಮೇಲ್ ಕುನಿಯಿಲ್ ಪೀಡಿಗ ನಿವಾಸಿ ಜಂಶಾದ್ ಎಂಬವರ ಪತ್ನಿ ಫಹೀಮ(30) ಮೃತಪಟ್ಟ ಯುವತಿ. ನಿನ್ನೆ(ಬುದವಾರ) ಸಾಯಂಕಾಲ 5 ಗಂಟೆಯ ವೇಳೆ ಈ ಘಟನೆ ನಡೆದಿದೆ. ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದೆ.

   ಅಂಗಳದಲ್ಲಿ ಮಗುವಿಗೆ ಅನ್ನ ಕೊಡುತ್ತಿದ್ದ ವೇಳೆ ಸಮೀಪದ ತೆಂಗಿನ ಮರ ಬುಡ ಸಹಿತ ಉರುಳಿದೆ. ಗಂಭೀರ ಗಾಯಗೊಂಡ ಫಹೀಮಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಪ್ರಾಣ ಉಳಿಸಲಾಗಲಿಲ್ಲ.

Post a Comment

0 Comments