ಉಪ್ಪಳ : ಖ್ಯಾತ ದೈವ ನರ್ತನ ಕಲಾವಿದ ಬೇಕೂರು ಸಮೀಪದ ಕನ್ನಟಿಪಾರೆ ನಿವಾಸಿ ಜಯನ್ ಪಣಿಕ್ಕರ್ (58) ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ನಿಧನರಾದರು. ರಾಮನ್ - ಮಾಣಿ ದಂಪತಿಗಳ ಪುತ್ರನಾದ ಜಯನ್ ಪಣಿಕ್ಕರ್ ಪರಂಪರಾಗತ ದೈವ ನರ್ತನ ಕಲೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಉಷಾ, ಮಕ್ಕಳಾದ ಹರಿತ ,ಅಯನ, ಸಹೋದರ ಕೃಷ್ಣ, ಸಹೋದರಿಯರಾದ ರೋಹಿಣಿ,ಸಾವಿತ್ರಿ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

0 Comments