ಉಪ್ಪಳ : ಎನ್ ಟಿ ಯು ಮಂಜೇಶ್ವರ ಉಪಜಿಲ್ಲಾಸಮ್ಮೇಳನವು ಬಾಯಾರು ಮುಳಿಗದ್ದೆ ಹೆದ್ದಾರಿ ಎಯುಪಿ ಶಾಲೆಯಲ್ಲಿ ನಡೆಯಿತು. ಮಂಜೇಶ್ವರ ಉಪಜಿಲ್ಲಾ ಎನ್ ಟಿಯು ಅಧ್ಯಕ್ಷೆ ಧ್ವಜಾರೋಹಣ ಗೈಯುವುದರ ಮೂಲಕ ಸಮ್ಮೇಳನಕ್ಕೆ ಅಧಿಕೃತ ಚಾಲನೆ ನೀಡಿದರು. ನಂತರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಹೆದ್ದಾರಿ ಎಯುಪಿ ಶಾಲೆಯ ಮೇನೇಜರ್ ರಾಜೇಶ್ ಎನ್ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಎನ್ ಟಿ ಯು ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಕೆ.ಆರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎನ್ ಟಿ ಯು ರಾಜ್ಯ ವನಿತಾ ವಿಂಗ್ ಜೊತೆ ಕಾರ್ಯದರ್ಶಿ ಸುಚಿತಾ ಟೀಚರ್, ಹೆದ್ದಾರಿ ಶಾಲೆಯ ಮುಖ್ಯ ಶಿಕ್ಷಕರಾದ ಆದಿನಾರಾಯಣ ಭಟ್, ರಾಜ್ಯ ಸಮಿತಿ ಸದಸ್ಯರಾದ ಸತೀಶ್ ಶೆಟ್ಟಿ ಒಡ್ಡಂಬೆಟ್ಟು ಹಾಗೂ ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಂಜೇಶ್ವರ ಉಪಜಿಲ್ಲಾ ಎನ್ ಟಿ ಯು ಕಾರ್ಯದರ್ಶಿ ದೇವಿಪ್ರಸಾದ್ ಉಚ್ಚಿಲ ಸ್ವಾಗತಿಸಿ, ಉಪಾಧ್ಯಕ್ಷ ಶ್ರೀಧರ ಭಟ್ ವಂದಿಸಿದರು. ಹೆದ್ದಾರಿ ಎಯುಪಿ ಶಾಲೆಯ ಶಿಕ್ಷಕಿ ದೀಪಿಕ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಭಾಗವಾಗಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ರಸಪ್ರಶ್ನೆ ಮತ್ತು ದೇಶಭಕ್ತಿ ಗೀತೆ ಸ್ಪರ್ಧೆ ಎಲ್ ಪಿ, ಯು.ಪಿ, ಪ್ರೌಢ ಶಾಲಾ ಮಕ್ಕಳಿಗೆ ಹಮ್ಮಿಕೊಳ್ಳಲಾಯಿತು. ನಂತರ ನಡೆದ ಸಮ್ಮೇಳನದ ಸಮಾರೋಪ ಸಮಾರಂಭ ಹಾಗೂ ಸಂಘಟನಾ ಚರ್ಚೆಯ ಅಧ್ಯಕ್ಷತೆಯನ್ನು ಎನ್ ಟಿಯು ರಾಜ್ಯ ಸಮಿತಿ ಸದಸ್ಯ ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾರೂ,ಎನ್ ಟಿ ಯು ರಾಜ್ಯ ಸಮಿತಿ ಉಪಾಧ್ಯಕ್ಷರಾದ ವೆಂಕಪ್ಪ ಶೆಟ್ಟಿ ಪಿ, ಮಂಜೇಶ್ವರ ಪೆನ್ಷನರ್ಸ್ ಸಂಘದ ಅಧ್ಯಕ್ಷರಾದ ವಿಘ್ನೇಶ್ವರ ಕೆದುಕೋಡಿ,ರಾಜ್ಯ ಸಮಿತಿ ಸದಸ್ಯರಾದ ಸತೀಶ್ ಶೆಟ್ಟಿ ಒಡ್ಡಂಬೆಟ್ಟು ಹಾಗೂ ಎನ್ ಟಿ ಯು ಜಿಲ್ಲಾ ಕಾರ್ಯದರ್ಶಿ ಅಜಿತ್ ಕುಮಾರ್ ಉಪಸ್ಥಿತರಿದ್ದರು.ಎನ್ ಟಿ ಯು ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ದೇವಿಪ್ರಸಾದ್ ಉಚ್ಚಿಲ ಕಾರ್ಯಚಟುವಟಿಕೆಗಳ ವರದಿ ವಾಚಿಸಿದರು. ಸಮಿತಿಯ ಕೋಶಾಧಿಕಾರಿ ರಘುವೀರ ಎಮ್ ಲೆಕ್ಕಪತ್ರ ಮಂಡಿಸಿದರು. ಸಹಕಾರ್ಯದರ್ಶಿ ದಯಾನಂದ ಸ್ವಾಗತಿಸಿ, ಮಂಜೇಶ್ವರ ವನಿತಾ ವಿಂಗ್ ಕನ್ವೀನರ್ ಮಮತ ಧನ್ಯವಾದವಿತ್ತರು. ಜಿಲ್ಲಾ ಸಮಿತಿ ಸದಸ್ಯ ಈಶ್ವರ ಕಿದೂರು ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ತೀರ್ಪಗಾರರಾಗಿ ಸಹಕರಿಸಿದ ಶೇಖರ ಶೆಟ್ಟಿ ಬಾಯಾರು ಹಾಗೂ ರೂಪಶ್ರೀ ಕಳಂದೂರು ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನೂತನ ಸಮಿತಿ ರೂಪೀಕರಣ ನಡೆಯಿತು.ಚಂದಿಕಾ ಕೆ ಆರ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಉಚ್ಚಿಲ , ಖಜಾಂಜಿಯಾಗಿ ರಘುವೀರ ಎಮ್ ಹೀಗೆ ಸದಸ್ಯರನ್ನೊಳಗೊಂಡ ನೂತನ ಸಮಿತಿ ರೂಪೀಕರಣ ಗೊಂಡಿತು.

0 Comments