Ticker

6/recent/ticker-posts

Ad Code

ಯುಎಇ ಬಂಟ್ಸ್ ನ 48 ನೇ ವರ್ಷದ ಕೂಡುಕಟ್ಟ್ "ಭಾವೈಕ್ಯ" ಬಂಟರ ಸಮಾಗಮ ಸಂಪನ್ನ

 


ದುಬೈ : ನಗರದ ಶೇಖ್ ಝಯೀದ್ ರಸ್ತೆಯ ಮಿಲೆನೀಯಂ ಪ್ಲಾಝ ಹೋಟೆಲ್ ನ ಸಭಾಂಗಣದಲ್ಲಿ ಯುಎಇಯ ಒಂದು ಸಾವಿರದ ಐದುನೂರು ಕ್ಕು ಅಧಿಕ ಬಂಟರು ಸೇರಿ ಯುಎಇ ಬಂಟ್ಸ್ ನ 48 ನೇ ವರ್ಷದ ಕೂಡುಕಟ್ಟ್ "ಭಾವೈಕ್ಯ" ಬಂಟರ ಸಮಾಗಮ ಅದ್ದೂರಿಯಾಗಿ ನಡೆಯಿತು.

       ಬೆಳಿಗ್ಗೆ ಹತ್ತು ಗಂಟೆಗೆ 48ನೇ ವರ್ಷದ ಕೂಡುಕಟ್ಟ್ ಭಾವೈಕ್ಯ ಕಾರ್ಯಕ್ರಮ‌ದ ಉದ್ಘಾಟನೆಯನ್ನು ಸಂಘದ ಪೋಷಕರಾದ ಸರ್ವೋತ್ತಮ ಶೆಟ್ಟಿ,ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ,ಉಪಾಧ್ಯಕ್ಷರಾದ ಪ್ರೇಮ್ ನಾಥ್ ಶೆಟ್ಟಿ,ಪ್ರದಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಮತ್ತು ಸಂಘಟನಾ ಸಮಿತಿಯ ಮಹಿಳಾ ಸದಸ್ಯೆಯರು ದೀಪ ಬೆಳಗಿಸಿ ಚಾಲನೆ ನೀಡಿದರು.ಸಲಹಾ ಸಮಿತಿಯ ಸದಸ್ಯರಾದ ರತ್ನಾಕರ ಶೆಟ್ಟಿ,ಸುಂದರ ಶೆಟ್ಟಿ,ದಿನೇಶ್ ಶೆಟ್ಟಿ ಕೊಟ್ಟಿಂಜ,ಸಜನ್ ಶೆಟ್ಟಿ,ಸುಜತ್ ಶೆಟ್ಟಿ ಉಪಸ್ಥಿತರಿದ್ದರು.ನಂತರ ಶ್ರೀಮತಿ ಸಂಗೀತಾ ಶೆಟ್ಟಿ ತಂಡದವರಿಂದ ಬಂಟ ಗೀತೆ ಮತ್ತು ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ಕಲಾವಿದರಿಂದ ಗಣಪತಿ ಸ್ತುತಿಯ ಯಕ್ಷಗಾನ ನೃತ್ಯದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಂಡಿತು.

       ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ  ಯುಎಇ ಬಂಟ ಬಾಂಧವರಿಂದ ತುಳುನಾಡ ಮಣ್ಣ್ ದ ಮಹಿಮೆ,ಭಾರತದ‌ ಸಂಸ್ಕೃತಿಯ ಪಯಣ,ಬಂಟೆರ್ನ ಐಸಿರ, ಕಿರುಚಿತ್ರ ಸ್ಪರ್ಧೆ ಇಂತಹ ಸ್ಪರ್ಧಾ ಕಾರ್ಯಕ್ರಮ ಒಂದಕ್ಕೊಂದು ಒಂದು ವಿಭಿನ್ನ ರೀತಿಯಲ್ಲಿ ಮೂಡಿ ಬಂದ ಕಾರಣ ಆರಂಭದಿಂದ ರಾತ್ರಿ ಒಂಬತ್ತು ಗಂಟೆಯ ತನಕ ಸಭಾಂಗಣ ತುಂಬಿ ತುಳುಕುತ್ತಿತ್ತು.

"ಬಂಟ ವಿಭೂಷಣ","ಮಣ್ಣಿನ ಮಗ", "ತುಳುನಾಡ ಮರ್ಮಯೆ" ಪ್ರಶಸ್ತಿ ಪ್ರದಾನ

     


  ವರ್ಷಂಪ್ರತಿ ಕೊಡಮಾಡುವ ಪ್ರತಿಷ್ಠಿತ "ಬಂಟ ವಿಭೂಷಣ" ಪ್ರಶಸ್ತಿಯನ್ನು ದ.ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ ನೀಡಿ ಗೌರವಿಸಲಾಯಿತು.ಪ್ರಶಸ್ತಿ ನಡೆದ ಚೌಟರವರು ಮಾತನಾಡುತ್ತಾ ಈ ಇಷ್ಟು ದೊಡ್ಡ ಪ್ರಶಸ್ತಿಗೆ ನಾನು ಅರ್ಹನಲ್ಲ ಆದರೂ ಈ ಪ್ರಶಸ್ತಿಯನ್ನು ಪ್ರೀತಿ ಪೂರ್ವಕವಾಗಿ ಸ್ವೀಕರಿಸುತ್ತೆನೆ ಎಂದು ಹೇಳುತ್ತ ದ.ಕನ್ನಡ ಜಿಲ್ಲೆಯನ್ನು ಒಂದು ಮಾದರಿ ಜಿಲ್ಲೆಯಾಗಿ ಮಾಡಬೇಕು ಮತ್ತು ಅಲ್ಲಿಯ ಯುವಕರಿಗೆ ಅಲ್ಲಿಯೇ ಕೆಲಸ ಸಿಗಬೇಕು ಎಂಬ ಕನಸು ಕಂಡವನು ನಾನು ಅದಕ್ಕೆ ಇಲ್ಲಿರುವ ಎಲ್ಲಾ ದ.ಕನ್ನಡ ಜಿಲ್ಲೆಯವರು ಅದಕ್ಕೆ ಸಾಥ್ ನೀಡಬೇಕು ಎಂದು ಹೇಳುತ್ತ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾ ಕಾಯಕ್ರಮಕ್ಕೆ ಶುಭವನ್ನು ಹಾರೈಸಿದರು.

       


ನಟ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ದಂಪತಿಗಳಿಗೆ "ಮಣ್ಣಿನ ಮಗ" ಮತ್ತು ನಟಿ ವಿವೇಕ್ ಒಬೆರಾಯ್ ರವರಿಗೆ "ತುಳುನಾಡ ಮರ್ಮಯೆ" ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪ್ರಶಸ್ತಿ ಸ್ವೀಕರಿಸಿ ನಟರಾದ ರಿಷಬ್ ಶೆಟ್ಟಿ ಮಾತನಾಡುತ್ತಾ ಕಾಂತಾರ ಚಾಪ್ಟರ್ ಒಂದು ಸಿನಿಮಾ ಬಿಡುಗಡೆ ಆದ ಮೇಲೆ ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಪ್ರವೀಣ್ ಅಣ್ಣ ನನ್ನಇಂತಹಾ ಸ್ನೇಹಿತರಾಗಿರುವುದರಿಂದ ಈ ಪಾಲ್ಗೊಂಡಿದ್ದೆನೆ ಎಂದರು. ಮತ್ತು ವಿವೇಕ್ ಒಬೆರಾಯ್ ರವರು ಮಾತನಾಡುತ್ತಾ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರೊದು ನಮಗೆ ಹೆಮ್ಮೆ ಆಗುತ್ತದೆ ಪ್ರವೀಣ್ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಇನ್ನೂ ಮುಂದೆಯೂ ಯುಎಇ ಬಂಟ್ಸ್ ನ ಕಾರ್ಯಕ್ರಮ ನಿರಂತರ ನಡೆಯುತ ಇರಲಿ ಮೆಚ್ಚುಗೆಯ ಮಾತುಗಳನ್ನು ಹೇಳುತ್ತ ಕಾಯಕ್ರಮಕ್ಕೆ ಶುಭವನ್ನು ಹಾರೈಸಿದರು.

         ಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದ ಎಲ್ಲಾ ಪ್ರಾಯೋಜಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.ವೇದಿಕೆಯಲ್ಲಿ ಯುಎಇ ಬಂಟ್ಸ್ ನ ಮಹಾ ಪೋಷಕರಾದ ಬಿ.ಆರ್ ಶೆಟ್ಟಿ,ಸರ್ವೋತ್ತಮ ಶೆಟ್ಟಿ,ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಉಪಾಧ್ಯಕ್ಷರಾದ ಪ್ರೇಮ್ ನಾಥ್ ಶೆಟ್ಟಿ ಪ್ರದಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು.ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲಾರನ್ನು ಸ್ವಾಗತಿಸಿದರು.

       ಕಾರ್ಯಕ್ರಮದ ಯಶಸ್ಸಿನ ಹಿಂದೆ ದುಡಿದ 2025 ನೇಮತ್ತೆ ಸಾಲಿನ ಸಂಘಟನಾ ಸಮಿತಿಯ ಸದಸ್ಯರಾದ ದಿನ್ ರಾಜ್ ಶೆಟ್ಟಿ ಮತ್ತು ದೀಪ್ತಿ ದಿನ್ ರಾಜ್ ಶೆಟ್ಟಿ, ಅನುಪ್ ಶೆಟ್ಟಿ ಮತ್ತು ಚೈತ್ರ ಅನುಪ್ ಶೆಟ್ಟಿ,ಸುಪ್ರಜ್ ಶೆಟ್ಟಿ  ಮತ್ತು ಪೃಥ್ವಿ ಸುಪ್ರಜ್ ಶೆಟ್ಟಿ, ವಸಂತ ಶೆಟ್ಟಿ ಮತ್ತು ರಜಿತಾ ವಸಂತ ಶೆಟ್ಟಿ,ಸೀತಾರಾಮ ಶೆಟ್ಟಿ ಮತ್ತು ಅಶ್ವಿನಿ ಸೀತಾರಾಮ ಶೆಟ್ಟಿ,ಗೋಕುಲದಾಸ್ ರೈ ಮತ್ತು ನಿಶ್ಮಿತಾ ಗೋಕುಲದಾಸ್ ರೈ, ಕೀರ್ತಿ ನಿತ್ಯ ಪ್ರಕಾಶ್ ಶೆಟ್ಟಿ, ಮೇಘ ಪ್ರಸನ್ನ ಶೆಟ್ಟಿ,ವಿದ್ಯಾಶ್ರಿ ಸತೀಶ್ ಹೆಗ್ಡೆ,ದೀಪಾ ಕಿರಣ್ ಶೆಟ್ಟಿ,ಲಾಸ್ಯ ಸಂಪತ್ ಶೆಟ್ಟಿ  ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಕೃತಜ್ಞತೆ ತಿಳಿಸಿದ್ದರು.

ಯುಎಇ ಬಂಟ್ಸ್ ನ ನೂತನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರ,ಸಲಹಾ ಸಮಿತಿಯ ಸದಸ್ಯರ ಮತ್ತು 2025 ನೇ ಸಾಲಿನ ಸಂಘಟನಾ ಸಮಿತಿಯ ಸರ್ವ ಸದಸ್ಯರ ಕಳೆದ ನಾಲ್ಕು ತಿಂಗಳುಗಳ ಕಠಿಣ ಪರಿಶ್ರಮದ ಫಲವೇ ಅಷ್ಟೊಂದು ಸಂಖ್ಯೆಯ ಬಂಟರು ಸೇರಲು ಹಾಗೂ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು.

 


  ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳ ವಿಜೇತರು : "ಬಂಟೆರ್ನ ಐಸಿರ" ಪ್ರಥಮ ಅಥರ್ವ ವಸಂತ ಶೆಟ್ಟಿ(ನಾಗಾರಾಧನೆ ),ದ್ವಿತೀಯ ತಶ್ವಿ ಸಂತೋಷ್ ಶೆಟ್ಟಿ(ಕಾಲುಂಗುರ),ತೃತೀಯ ಮಹೀಕಾ ಶೆಟ್ಟಿ (ಮುಡಿ  ಕಟ್ಟುನು).

"ತುಳುನಾಡ ಮಣ್ಣಿನ ಮಹಿಮೆ" ಪ್ರಥಮ ಮುಂಡ್ಕೂರು ಕ್ಷೇತ್ರ ತಂಡ,ದ್ವಿತೀಯ ಕಟೀಲು ಕ್ಷೇತ್ರ ತಂಡ,ತೃತೀಯ ಮಂದರ್ತಿ ಕ್ಷೇತ್ರ ತಂಡ.

"ನಮ್ಮ ಸಂಸ್ಕೃತಿಯ ಪಯಣ" ಕಾರ್ಯಕ್ರಮದ ಪ್ರಥಮ ಕರ್ನಾಟಕ ತಂಡ,ದ್ವಿತೀಯ ರಾಜಸ್ಥಾನ ತಂಡ,ತೃತೀಯ ಮಹಾರಾಷ್ಟ್ರ ತಂಡ.

"ಕಿರುಚಿತ್ರ ಸ್ಪರ್ಧೆ" ಪ್ರಥಮ ಸುಸೈಡ್ ಡೆ,ದ್ವಿತೀಯ ಲಾಸ್ಟ್ ಡೋಸ್,ತೃತೀಯ ರಾಂಗ್ ಮೂವ್(ತಪ್ಪು ಹೆಜ್ಜೆ).

ಪ್ರತಿನಿಧಿ ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ದುಬೈ

Post a Comment

0 Comments