Ticker

6/recent/ticker-posts

Ad Code

ಸಜಂಕಿಲದಲ್ಲಿ ಧರ್ಮತ್ತಡ್ಕ ಶಾಲಾ ಎನ್.ಎಸ್.ಎಸ್ ಶಿಬಿರ ಸಂಘಟಕ ಸಮಿತಿ ಸಭೆ

 

ಸಜಂಕಿಲ: ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕ, ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಸಪ್ತದಿನ ಸಹವಾಸ ಶಿಬಿರವು ಡಿಸೆಂಬರ್ 26ರಿಂದ ಜನವರಿ 1ರವರೆಗೆ "ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ,ಸಜಂಕಿಲ" ಇಲ್ಲಿ ನಡೆಯಲಿದೆ. ಇದರ ಯಶಸ್ವಿಗಾಗಿ ಸಜಂಕಿಲ ಶಾಲೆಯಲ್ಲಿ ನಡೆದ "ಸಂಘಟಕ ಸಮಿತಿ"ಯ ಸಭೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಲ್ಲಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ  ಆನಂದ.ಕೆ ಇವರು ವಹಿಸಿದರು. ಧರ್ಮತ್ತಡ್ಕ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ  ಅಶೋಕ ಭಂಡಾರಿ ಕುಡಾಲು, ಸಜಂಕಿಲ ಶಾಲೆಯ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಸ್ಮಿತಾ ಕೆ, ಧರ್ಮತಡ್ಕ ಶಾಲಾ ಪ್ರಾಂಶುಪಾಲ  ರಾಮಚಂದ್ರ ಭಟ್ ಯನ್, ಸಜಂಕಿಲ ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ ಭಟ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಿಬಿರದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಶಿಬಿರದ ಹಲವು ಕಾರ್ಯಚಟುವಟಿಕೆಗಳ ಬಗ್ಗೆ ಎನ್.ಎಸ್.ಎಸ್ ಯೋಜನಾಧಿಕಾರಿ  ನಿವೇದಿತಾ ಟೀಚರ್ ಮಾಹಿತಿ ನೀಡಿದರು. ಸಭೆಯಲ್ಲಿ ಆಶಾ ಕಾರ್ಯಕರ್ತೆಯರು, ಶಾಲಾ ಅಧ್ಯಾಪಕರು, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಧರ್ಮತ್ತಡ್ಕ ಶಾಲಾ ಹಿರಿಯ ಅಧ್ಯಾಪಕ  ಸತೀಶ್ ಕುಮಾರ್ ಶೆಟ್ಟಿ ನಿರೂಪಿಸಿ, ಪ್ರಾಂಶುಪಾಲ  ರಾಮಚಂದ್ರ ಭಟ್ ಯನ್ ಸ್ವಾಗತಿಸಿ, ಅಧ್ಯಾಪಕ ನಾಗರಾಜ ವೈ ವಂದಿಸಿದರು.

Post a Comment

0 Comments