ಪಾಲಕ್ಕಾಡ್‌ನ ನೆನ್ಮಾರಾ ಚಾತಮಂಗಲಂ ಮೂಲದ ಬಾಬು (45) ಮನಾಲಿ ಸೇತುವೆಯ ಕೆಳಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಎರ್ನಾಕುಲಂನಿಂದ ಪಾಲಕ್ಕಾಡ್ ಗೆ ಸಂಚರಿಸುವ ಫಾಸ್ಟ್ ಪ್ಯಾಸೆಂಜರ್ ಬಸ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈತ ಶನಿವಾರ ಸಂಜೆ ಟೋಲ್ ಪ್ಲಾಜಾ ಬಳಿ ಬಸ್ ನಿಲ್ಲಿಸಿ ತೆರಳಿದ್ದಾನೆ. ಅರ್ಧ ಗಂಟೆ ಕಳೆದರೂ ಚಾಲಕ ಕಾಣದ ಹಿನ್ನೆಲೆಯಲ್ಲಿ ಪ್ರಯಾಣಿಕರು ಗಲಾಟೆ ನಡೆಸಿದರು. ಆಗ ಕಂಡಕ್ಟರ್ ಮಧ್ಯಪ್ರವೇಶಿಸಿ ಬೇರೆ ಬಸ್ಸಿನಲ್ಲಿ ಬಿಡುವ ವ್ಯವಸ್ಥೆ ಮಾಡಿದ್ದರು. ಬಳಿಕ ಮತ್ತೊಬ್ಬ ಚಾಲಕನನ್ನು ಕರೆಯಿಸಿ ಬಸ್ ಅನ್ನು ಪುದುಕ್ಕಾಡ್ ಡಿಪೋಗೆ ಸ್ಥಳಾಂತರಿಸಲಾಯಿತು. ಡ್ರೈವರ್ ನಾಪತ್ತೆಯಾಗಿರುವ ಬಗ್ಗೆ ಸಂಬಂಧಿಕರೊಂದಿಗೆ ಪೋಲಿಸರು ತನಿಖೆ ನಡೆಸಿದಾಗ ಮನಾಲಿ ಸೇತುವೆ ಬಳಿ ಬಾಬು ಅವರ ಮೊಬೈಲ್ ಕಂಡು ಬಂದಿದ್ದು ಬಳಿಕ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ.
.jpeg)
0 Comments