ಕುಂಬಳೆ : ಶಾಂತಿಪಳ್ಳ ವಾರ್ಡ್ ಬಿಜೆಪಿಯ ಸಿಟ್ಟಿಂಗ್ ಸೀಟ್ ಎಂದು ಪರಿಗಣಿಸಲ್ಪಟ್ಟಿತ್ತು. ಇದನ್ನು ಮಣಿಸಲು ಸಿಪಿಎಂ ರಣ ತಂತ್ರ ಹೆಣೆದು 21 ವರ್ಷದ ಸ್ನೇಹಾ ಕೆ. ಯನ್ನು ಈ ಬಾರಿ ಕಣಕ್ಕಿಳಿಸಿತ್ತು. ಇಲ್ಲಿನ ಬಿಜೆಪಿ ಅಭ್ಯರ್ಥಿ ಪ್ರೇಮಲತಾ ಅವರನ್ನು118 ಮತಗಳ ಬಹುಮತದಿಂದ ಸೋಲಿಸುವ ಮೂಲಕ
ಸ್ನೇಹಾ ರಾಜ್ಯದ ಅತ್ಯಂತ ಕಿರಿಯ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.ಮುನ್ನಾಡ್ ಪೀಪಲ್ಸ್ ಕಾಲೇಜಿನ ಜೆಡಿಸಿ ವಿದ್ಯಾರ್ಥಿನಿಯಾದ ಸ್ನೇಹಾ ಈ ಹಿಂದೆ ಕಾಸರಗೋಡು ಸರಕಾರಿ ಕಾಲೇಜಿನ ಲಲಿತಕಲಾ ಕಾರ್ಯದರ್ಶಿಯಾಗಿ, ಬಾಲಸಂಘದ ಕಾರ್ಯದರ್ಶಿ, ಎಸ್‌ಎಫ್‌ಐ ಘಟಕ ಕಾರ್ಯದರ್ಶಿ ಹಾಗೂ ಜಿಲ್ಲಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಳು. ಜಾನಪದ ಗಾಯಕಿಯಾಗಿಯೂ ಗುರುತಿಸಿಕೊಂಡಿರುವ ಈಕೆ ಮಾಜಿ ಪಂ.ಸದಸ್ಯ ಕೊಗ್ಗು ಕುಂಬಳೆ ಮತ್ತು ಅಂಗನವಾಡಿ ಸಹಾಯಕಿ ಲೀಲಾವತಿ ದಂಪತಿಯ ಪುತ್ರಿ.

0 Comments