Ticker

6/recent/ticker-posts

Ad Code

ಮಂಗಲ್ಪಾಡಿ ಮತ್ತು ಮಧೂರಿನಲ್ಲಿ ಚುನಾವಣಾ ಎಣಿಕೆ ಬಳಿಕ ಘರ್ಷಣೆ : ಕೇಸು ದಾಖಲು

 


ಕಾಸರಗೋಡು: ಮತ ಎಣಿಕೆಯ ವಿಜಯೋತ್ಸವದ ನೆಪದಲ್ಲಿ ಮಂಗಲ್ಪಾಡಿಯಲ್ಲಿ ಮನೆಯೊಂದಕ್ಕೆ  ಕಲ್ಲು ತೂರಾಟದಿಂದ ಎಲ್‌ಡಿಎಫ್ ಸ್ವತಂತ್ರ ಸದಸ್ಯ ಹಾಗೂ ಅವರ ಪತ್ನಿ ಗಾಯಗೊಂಡಿದ್ದಾರೆ. ಇಲ್ಲಿನ ಎರಡನೇ ವಾರ್ಡ್ ಉಪ್ಪಳ ಗೇಟ್ ಸ್ವತಂತ್ರ ನಿವಾಸಿ ಮತ್ತು ಎನ್‌ಸಿಪಿ-ಎಸ್ ಮಂಜೇಶ್ವರಂ ಬ್ಲಾಕ್ ಉಪಾಧ್ಯಕ್ಷ ಅಶ್ರಫ್ ಪಚ್ಲಂಪಾರೆ ಮತ್ತು ಅವರ ಪತ್ನಿ ಅವ್ವಾಬಿ  ಗಾಯಗೊಂಡಿದ್ದಾರೆ

ಇಬ್ಬರನ್ನೂ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯೋತ್ಸವ ನಡೆಸಿದ ಮುಸ್ಲಿಂ ಲೀಗ್ ಕಾರ್ಯಕರ್ತರು ಅವರ ವಿರುದ್ಧ ಸ್ಪರ್ಧಿಸಿದ ಇವರ ಮನೆ ಮೇಲೆ ಕಲ್ಲು ತೂರಾಟ, ಪಟಾಕಿ ಸಿಡಿಸಿದರು ಎಂಬುದಾಗಿ ದೂರಲಾಗಿದೆ. ಮನೆಯ ಮುಂಭಾಗದ ಕಿಟಿಕಿಯ ಗಾಜು ಒಡೆದು ಹೋಗಿದೆ.

ಅವ್ವಾಬಿಯ ಎರಡೂ ಕಾಲುಗಳಿಗೆ ಗಾಯವಾಗಿದೆ. ಆಕೆಯ ಮಕ್ಕಳಾದ ಅಮೀರಾ ಮತ್ತು ಶೈಲಾ ಕೂಡ ಗಾಯಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈ.ಬಿ. ವಿಜಯ್ ಭರತ್ ರೆಡ್ಡಿ ಸೂಚನೆ ಮೇರೆಗೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ತೀವ್ರ ಪೈಪೋಟಿ ನಡೆದ ಈ ವಾರ್ಡ್ ನಲ್ಲಿ ಲೀಗ್ ನ ಗೋಲ್ಡನ್ ಅಬ್ದುಲ್ ರೆಹಮಾನ್ 94 ಮತಗಳಿಂದ ಗೆಲುವು ಸಾಧಿಸಿದ್ದರು. 

ಮಧೂರು ಪಂಚಾಯಿತಿ ವ್ಯಾಪ್ತಿಯ 8 ಮತ್ತು 9ನೇ ವಾರ್ಡ್‌ನ ನಿವಾಸಿಗಳಾದ ನೂರ್‌ಜಹಾನ್‌ ಮತ್ತು ಸುಲೈಖಾ ಮುಹಮ್ಮದಲಿ ಎಂಬುವರ ಮನೆಗಳಿಗೆ ಬಾಂಬ್‌ ದಾಳಿ ನಡೆದಿದೆ. ಗಾಯಾಳು ಸುಲೈಖಾ ಮತ್ತು ಆಕೆಯ ಮಗಳು ಆಯಿಷಾ ಸಿಯಾನ್ ಅವರನ್ನು ಚೆಂಗಳ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ..

Post a Comment

0 Comments