Ticker

6/recent/ticker-posts

Ad Code

ಪೆರಡಾಲ ಬ್ರಹ್ಮಕಲಶೋತ್ಸವ ಆಮಂತ್ರಣ ವಿತರಣಾ ಮಹಾ ಅಭಿಯಾನ : ಬದಿಯಡ್ಕ ಪಂ.ವ್ಯಾಪ್ತಿಯ 4 ಸಾವಿರ ಮನೆ ಸಂಪರ್ಕ ಯಶಸ್ವಿ

 

ಬದಿಯಡ್ಕ ; ಪೆರಡಾಲ ಶ್ರೀಉದನೇಶ್ವರ ಕ್ಷೇತ್ರದ ಬ್ರಹ್ಮಕಲಶೋತ್ಸವ ಎಪ್ರಿಲ್ 17ರಿಂದ 28ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಬ್ರಹ್ಮಕಲಶೋತ್ಸವ ಆಮಂತ್ರಣ ಮಹಾ ಅಭಿಯಾನಕ್ಕೆ ಶ್ರೀ ನಿತ್ಯಾನಂದ ಶೆಣೈಯವರಿಂದ ಚಾಲನೆ ನೀಡಲಾಯಿತು. ಒಂದು ತಂಡದಲ್ಲಿ 5 ಮಂದಿಯಂತೆ ಒಟ್ಟು 30ರಷ್ಟು ತಂಡಗಳು ಪಾಲ್ಗೊಂಡು ಬದಿಯಡ್ಕ ಪಂಚಾಯತ್ ವ್ಯಾಪ್ತಿ ಹಾಗೂ ಸುತ್ತುಮುತ್ತಲಿನ ವಿವಿಧ ಪ್ರದೇಶದ ಮನೆಗಳಿಗೆ ಆಮಂತ್ರಣ ನೀಡಿದರು. ಈ ಮೂಲಕ ಸುಮಾರು 4000ಕ್ಕೂ ಮಿಕ್ಕಿ ಮನೆಗಳನ್ನು ಸಂಪರ್ಕಿಸಲಾಯಿತು. ಆರ್ಥಿಕ ಸಂಗ್ರಹವೂ ನಡೆಯಿತು. ಊರ ಮಹನೀಯರು, ಮಹಿಳೆಯರು, ಮಕ್ಕಳು  ಉತ್ಸಾಹದಿಂದ ಪಾಲ್ಗೊಂಡು ಮಹಾಅಭಿಯಾನಕ್ಕೆ ನೇತೃತ್ವ ನೀಡಿದರು.

Post a Comment

0 Comments